ಸಂಸಾರವೆಂಬುದು….
ಸರಿಗಮಪ ಅಲ್ಲ ಸಂಸಾರ
ಪತಿಯೆಂದರೆ ಪರಿಚಾರಕನಲ್ಲ
ಸತಿಯೆಂದರೆ ಸೇವಕಿಯಲ್ಲ
ಹಿರಿಯರ ನಾಣ್ಣುಡಿಯಷ್ಟೆ
ಪತಿ ಮನೆಯ ಹೊರಗೆ ಯಜಮಾನ
ಸತಿ ಪತಿಗೂ-ಮನೆಗೂ ಯಜಮಾನಿ
ಮನೆಯ ಹೊರಗೆ ಅವಳು ಮೌನಿ
ಒಳಗೆ ದುರ್ಗೆಯ ಅವತಾರ
ನೀ ಬಲ್ಲೆಯೆಲ್ಲ
ಬಂದಥಿಗಳಿಗೆ ಚಾ ಕಾಫಿ
ಮಾಡುವುದು ಗೊತ್ತು ಸತಿಗೆ
ಎದುರಾಡಿದರೆ ಅದೇ ಒಲೆಯ
ಮೇಲೆ ನಿನ್ನ ಕುದಿಸಿವುದು ಗೊತ್ತು
ಸೀರೆ ಕೊಡಿಸು ನೀ ಹಬ್ಬಕೆ
ಇಲ್ಲದಿರೆ ನೀರ ಕುಡಿಸುವಳು
ಹೊರಗೆ ನಿನಗೆ ಎದುರಾಡಿ
ಉಳಿದವರುಂಟೆ ಗಂಡೇ
ಒಳಗೆ ಎದುರಾಡಿದರೆ ನೀ
ಉಳಿಯುದುಂಟೇ ಆದರೂ
ಬಾಹ್ಯ ಅವತಾರದಲ್ಲಿ ನೀ
ನೀ ನಿಜ ಗಂಡಸೇ. ಪಾಪ.
ನವರಸ ಬಲ್ಲವ ನೀ
ಆದರೆ
ಅಲ್ಲಿ ಬರೀ ಶಾಂತ ರಸ
-ನಾಗಿರಲೇಬೇಕು ನೀ
ಕರೆದಾಗ ಮಾತ್ರ ನೀ
ಬಲಭೀಮನಾಗಿರಲೇಬೇಕು
ಇಲ್ಲದಿರೆ ನೀ ಬೃಹನ್ನಳೆ.
ವನದಲ್ಲಿ ಕುಳಿತು ಬರೆದಿಲ್ಲ
ಈ ಕವನ ಮನೆಯಲ್ಲೇ
ಕುಳಿತು ಬರೆದಿದ್ದು ಅಲ್ಲ
ನನ್ನಾಕೆ ಬರಸಿದ್ದು
-ಟಿ.ಎಂ.ನಾಗಭೂಷಣ, ಹೂವಿನ ಹಡಗಲಿ
*****