ಗಜಲ್
ಎಷ್ಟು ಹೇಳಿದರು ಸಿಟ್ಟು ಮಾಡ್ಕೊಂಡು
ಎದ್ದು ಹೋಗಬ್ಯಾಡ ಸುಮ್ನಿರು
ಗಂಟಲ್ದಾಗ ನರ ಕಿತ್ತು ಹೋಗಂಗ
ಕೂಗಬ್ಯಾಡ ಸುಮ್ನಿರು
ಒಂದ ಮಾತಿಗೆ ಬ್ಯಾಸರ ಮಾಡ್ಕೊಂಡು
ಮುಖ ಗಂಟಾಕಿ ಕುಂತ್ಯಾಕ
ಊರ ಮಂದಿ ಕರುದು ಪಂಚಾಯ್ತಿ
ಕೂಡ್ಸಬ್ಯಾಡ ಸುಮ್ನಿರು
ಮಲ್ಲಿಗಿ ಹೂವ ಮೈಸೂರು ಪಾಕು
ಬೇಕಂತ ಎಂದರ ಕೇಳಿನೇನ
ಇಟ್ಟಂಗ ಇದ್ದರೂ ಹಠ ಮಾಡಿ
ಸೊರಗಬ್ಯಾಡ ಸುಮ್ನಿರು
ಅನಬಾರದ್ದು ಅಂದಿಲ್ಲ ಮಾಡಬಾರದ್ದು ಮಾಡಿಲ್ಲ
ಊಟ ಬಿಟ್ಟು ಮಾತ್ಬಿಟ್ಟು
ಸಣ್ಣ ವಿಷಯಕ್ಕೆ ದೊಡ್ಡ ರಾದ್ದಾಂತ
ಮಾಡಬ್ಯಾಡ ಸುಮ್ನಿರು
ತಪ್ಪಿನ ಅರಿವಾಗಿ ಮನದಾಗ ಮರುಗಿ
ಪಿರಣಾನ ಕೊಡುವಷ್ಟು ಪಿರುತಿಸುವ
ರತುನಳ ಬಿಟ್ಟು ಬದುಕ ಇಲ್ಲಂತ
ತಿಳಿಬ್ಯಾಡ ಸುಮ್ನಿರು
-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ *****