ಅನುದಿನ ಕವಿತೆ-೭೮೯, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ….!

ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ….!

ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ
ನಿನ್ನ ಬಿರುಸು ಕಣ್ಣೋಟದ
ಕಿಡಿವೊಂದು ತಾಕಿದ ಘಳಿಗೆಯಿಂದ….

ನಿನ್ನನ್ನೆ ಧ್ಯಾನಿಸುತ್ತ
ನಾನಿಲ್ಲಿ ಮೇಣದಂತೆ ಕರಗುತ್ತಿದ್ದೇನೆ…

ನೀನು ನಶೆಯೋ
ಪ್ರೇಮದ ಪಾಶೆಯೋ
ಯಾವುದು ನನಗೀಗ ತಿಳಿಯದ ಮತಿಭ್ರಮೆ
ಅಂತೂ ನಾನೀಗ ಸವೆಯುತ್ತಿದ್ದೇನೆ
ನನ್ನೊಟ್ಟಿಗೆ ಹೆಜ್ಜೆ ಇಟ್ಟ
ಪಾದರಕ್ಷೆಯಂತೆ…

ನಾನೀಗ ಕಡುಮೋಹಿಯಾಗಿದ್ದೇನೆ
ನಿನ್ನ ನಗುವ ಹಚ್ಚಿಟ್ಟು
ಬೆತ್ತಲೆ ಕತ್ತಲೆಯ ನಡುವೆ
ನಿನ್ನನ್ನೆ ಹುಡುಕುವ ಚಟಕ್ಕೆ ಬಿದ್ದು
ನಾನು ಕತ್ತಲೆಯನ್ನೆ ಹಿಂಬಾಲಿಸುತ್ತಿದ್ದೇನೆ
ನಿನಗೆ ಕಾಣದ ಹಾಗೆ…

ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ
ನಿತ್ಯ ಸತ್ಯ
ನೀನು ಓದಿದ ಕವಿತೆ-
ಖಾಲಿಹಾಳೆ ಆವೂದೋ ಅನಾಮಿಕನ ಕೈಗೆ ಸಿಕ್ಕಿ
ಸುಟ್ಟು ಕರಕಲಾದಂತೆ…                                      ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ…

-ಸಿದ್ದುಜನ್ನೂರ್, ಚಾಮರಾಜ ನಗರ
*****