ಮರಿಯಮ್ಮನಹಳ್ಳಿ:ಪಟ್ಟಣದ ರಂಗಬಿಂಬ ಕಲಾಸಂಸ್ಥೆಯ ಮೊದಲನೇ ವಾರ್ಷಿಕೋತ್ಸವ,ಶರೀಫ ನಾಟಕ ಪ್ರದರ್ಶನ ಮಾರ್ಚ 7ರಂದು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಗಾಯತ್ರಿದೇವಿ ತಿಳಿಸಿದರು.
ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷೆ ಗಾಯತ್ರಿದೇವಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಭೀಮನಾಯ್,ಮಾಜಿ ಶಾಸಕ ನೇಮಿರಾಜನಾಯ್ಕ, ಪದ್ಮಶ್ರೀ ಮಂಜಮ್ಮಜೋಗತಿ, ಹಿರಿಯ ರಂಗಕಲಾವಿದೆ ಡಿ.ಹನುಮಕ್ಕ, ಸಮಾಜಸೇವಕ ಕುರಿಶಿವಮೂರ್ತಿ, ಮಾಜಿ ಜಿ.ಪಂ.ಸದಸ್ಯಗೋವಿಂದರ ಪರಶುರಾಮ, ಕಾ.ನಿ.ಪ.ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಲ.ಕ.ರಂ.ಅಧ್ಯಕ್ಷ ಹುರುಜೊಳ್ಳಿ ಮಂಜುನಾಥ, ಪ.ಪಂ.ಸದಸ್ಯ ಕೆ.ಮಂಜುನಾಥ, ಪತ್ರಕರ್ತ ವೆಂಕೋಬಪೂಜಾರ, ಪಿ.ಎಸ್.ಐ.ಹನುಮಂತಪ್ಪ ತಳವಾರ, ಪ.ಪಂ.ಮುಖ್ಯಾಧಿಕಾರಿ ಫಕೃದ್ದೀನ್ ಸಾಬ್ ಪಾಲ್ಗೊಳ್ಳುತ್ತಾರೆ. ಸನ್ಮಾನ: ರಂಗಗಸಂಘಟಕ ವಡಿಗೇರಿ ವಿರೂಪಾಕ್ಷಪ್ಪ, ರಂಗಕರ್ಮಿ ಎಂ.ಜಿ.ಶಿವನಾಗಪ್ಪರವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ನಂತರ ಮಂಜುನಾಥ ಬೆಳಕೆರಿ ರಚನೆಯ,ಸಿ.ಕೆ.ನಾಗರಾಜ ನಿರ್ದೇಶನದ ಶರೀಫ ನಾಟಕ ಪ್ರದರ್ಶನ ನಡೆಯಲಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸಿ.ಕೆ.ನಾಗರಾಜ, ಕಲಾವಿದರಾದ ಕೆ.ಮಲ್ಲನಗೌಡ, ಜಿ.ಮಲ್ಲಪ್ಪ, ಚಿನ್ನಾಪ್ರಯ್ಯ, ಸೋಮಣ್ಣ,ಸರದಾರ, ಪುಷ್ಪಸರದಾರ,ನವೀನ್,ಡಿ.ನಾರಾಯಣ,ಉಮೇಶ,ಎಲ್.ಕೊಟ್ರೇಶ, ಅಕ್ಷರ ಮತ್ತಿತರರು ಉಪಸ್ಥಿತರಿದ್ದರು.