ಧ್ರುವ ಇಲ್ಲದ ರಾಜಕೀಯಾಕಾಶ
ಇರುಳು ಕಳೆದು ಬೆಳಗು ಮೂಡುವ ವೇಳೆ
ಮಿಂಚಿ ಮರೆಯಾದ ಜನಮಾನಸದ ಧ್ರುವತಾರೆ
ಸೌಮ್ಯ ಹೃದಯಿ;ಸಾಮರಸ್ಯ ಪ್ರೇಮಿ
ಮೈತ್ರಿ ಬಿತ್ತುವವರನು ಹೃದಯವೊಂದು ಕೊಂದಿತೆ!
ಬುದ್ಧ-ಬಸವ-ಭೀಮರ ಗಾಢ ಅನುಯಾಯಿ
ಸದ್ದಿಲ್ಲದೆ ಅಸ್ತಂಗತವಾದ ಓ ಸಹೃದಯ.
ಅಭಿವೃದ್ಧಿಯ ಬೀಜವ ಬಿತ್ತಿ; ಭ್ರಷ್ಟತೆಯ ಕಳೆ ತೆಗೆದು
ಸರ್ವಾಂಗೀಣ ಪ್ರಗತಿಗೈದ ಶುದ್ಧಹಸ್ತವೇ…
ಜನರ ಆಶೋತ್ತರಗಳಿಗೆ ನಗುಮೊಗದಲ್ಲಿ ನಿಂತು
ರಾಜಕೀಯಕ್ಕೆ ಹೊಸ ಭಾಷ್ಯ ಬರೆದ ಕಣ್ಮಣಿ.
ತಳದಿಂದ ಕುಡಿವಡೆದು ಹೆಮ್ಮರವಾಗುವ ಹೊತ್ತಲ್ಲಿ
ಹೃದಯಸ್ತಂಭನದ ಸಿಡಿಲು ನುಂಗಿತೆ ಬೋಧಿಗಿಡವ
ಕಣ್ಣಹನಿಯ ಅಕ್ಷರಮಾಲೆ,ಬಿಕ್ಕಳಿಕೆಯ ನುಡಿ ನಮನ
‘ಧ್ರುವ’ ಇಲ್ಲದ ರಾಜಕೀಯಾಕಾಶ ಶೂನ್ಯ. ಶೂನ್ಯ.
– ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜ ನಗರ
*****