ಅನುದಿನ ಕವನ-೮೦೭, ಕವಿಯಿತ್ರಿ:ಅಂಜಲಿ ಬೆಳಗಲ್ಲು, ಹೊಸಪೇಟೆ, ಕವನದ ಶೀರ್ಷಿಕೆ: ಅವಳ‌ ಗೋರಿ

ಅವಳ ಗೋರಿ

ಗೆಳೆಯಾ ನಾ ನಿನ್ನ ನೆನಪಿಂದ ಬಹುದೂರ ಹೊರಟಿದ್ದೇನೆ
ಕಡಲ ತೀರದ ಯಾನಕ್ಕೆ
ಕವಲು ದಾರಿ ಹಿಡಿದು
ಹಿಂದಿರುಗಿ ಬಾರದೆ
ಮತ್ಯಾವುದೊ ಜನ್ಮದಲಿ ನಾ ನಿನಗೆ ಸಿಗುವೆ ಎಂಬ ಹುಸಿ ನಿರೀಕ್ಷೆಯ ಬಿತ್ತುತ್ತಾ
ಕುಡಿಕೆಯೊಳಗಿನ ಬೂದಿ ಕೆಂಡವಾಗುತ್ತಾ ನನ್ನವರ ಹೆಗಲ ಮೇಲೆ ಜರಿದು ನಡೆದಿದ್ದೆನೆ
ಮತ್ತೆಂದು ಬಾರದೆ,,

ಮತ್ತೆ ನನ್ನ ನೆನಪುಗಳ ದಾಳಿಗೆ ನೀ ನನ್ನ ಗೋರಿಯ ಅಗೆದು ಬಗೆದು ಹುಡುಕಬೇಡ ಗೆಳೆಯಾ
ಅಲ್ಲಿ ಸಿಗುವುದು ನನ್ನ ಅಸ್ತಿಯ ಎಲುಬು ತೊಗಲು ಮಾತ್ರ
ಗೆದ್ದಿಲು ತಿಂದ ಬುರುಡೆ ಮಾತ್ರ,,,

ಹರಿದ ಸೀರೆ ಅಂಚಿನ ತುದಿಗೆ ಗಂಟಾಕಿ
ಹರಕೆ ಹೊತ್ತು ಮೂರೊತ್ತು
ಬೆಡುತ್ತಿದ್ದೆ ಗೆಳೆಯಾ
ನೀ ನನ್ನಿಂದ ದೂರಾಗದಿರು ಎಂದು
ಅದೆ ಮುರುಕುಲು ಗುಡಿಸಿಲಿನ ಗರಿಗಳು ಒಣಸಗಣಿಯ ಕುಳ್ಳುಗಳು ಜಾಲಿ ಮರದ ತೊಗಟೆಗಳು
ಇಂದು ನನ್ನನ್ನೇರಿ ಮುಖ ಮುಚ್ಚಿ ಕುಣಿಯುತ್ತಿದ್ದಾವೆ
ಜೋತುಬಿದ್ದ ನನ್ನ ದೇಹವ ಕರುಕುಲು ಬೂದಿಯಂತೆ ಸುಡಲು,,

ಮತ್ತೆ ನೀ ನನ್ನ ವಿರಹವೇದನೆಗೆ ಬಲಿಯಾಗಿ
ಗಲ್ಲಿ ಗಲ್ಲಿಯೊಳಗೆ ಬಿತ್ತಿ ಬ್ಯಾನರ್ ಹಾಕಿಸಿ,ಗೋಡೆ ಗೊಡೆಗು ನನ್ನ ನೆನಪುಗಳ ಮೊಳೆ ಹೊಡೆದು
ನನ್ನ ಬೂದಿಯು ಹುಡುಕದಿರು ಗೆಳೆಯಾ
ಸಿಗಲಾರದ ಆಳಕ್ಕೆ ಅವಿತುಹೊಗಿದ್ದೆನೆ
ಉಸಿರಲಿ ಉಸಿರಾಗಿ ಗಾಳೆಯಲಿ ತೇಲಿಹೊಗಿದ್ದೆನೆ
ಮತ್ತೆ ನಿನ್ನ ನೆನಪಾದಗಾಲೆಲ್ಲ
ಕನಸುಗಳನೊಮ್ಮೆ ಕೊಂದು ನೋಡಲು ಬರುತ್ತೇನೆ
ಬಾರದ ಲೋಕಕೆ ಕರೆಯಲು ಮತ್ತೆ ನಾ ನಿನ್ನ ಮರೆಯಲು


-ಅಂಜಲಿ ಬೆಳಗಲ್, ಹೊಸಪೇಟೆ
*****