ಅನುದಿನ ಕವನ-೮೧೧, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಬೇವು ಬೆಲ್ಲ

ಬೇವು ಬೆಲ್ಲ
🌿🌿🌿🌿🌿

ಬಂದಿತು ಬಂದಿತು
ಮರಳಿ ಯುಗಾದಿ
ಎಲ್ಲರ ಬಾಳಲಿ
ಅರಳಲಿ ನೆಮ್ಮದಿ //

ಎಲ್ಲೆಡೆ ಚಿಗುರಿದ
ಚಿಗುರು ಚಿಗುರೆಲೆ
ಬನ – ಬನವ ತುಂಬಿದೆ
ಹೂವು ಹಸಿರೆಲೆ //

ಅಂಗಳದಲಿ ಅರಳಿದೆ
ರಂಗೋಲಿಯ ಬಣ್ಣ
ಬಾಗಿಲಿಗೆ ಸಿಂಗರಿಸಿದೆ
ಮಾವು – ಬೇವಿನ ತೋರಣ //

ಕೋಗಿಲೆ ಕೂಗುತಿದೆ
ಕುಹೂ – ಕುಹೂ ಎಂದು
ಹೊಸ ವರುಷಕೆ ಶುಭ ಕೋರಿದೆ
ಅದು ಕೂಡ ಇಂದು //

ನೋವಿನಲ್ಲೂ ನಗುವ
ಕಾಣಬೇಕು ನಾವು
ಬೆಲ್ಲದ ರುಚಿಯೊಂದಿಗೆ
ಇರಲಿ ಸ್ವಲ್ಪ ಬೇವು //

ಎಲ್ಲರ ಮನೆಯಲ್ಲೂ
ನಗುವು ತುಂಬಿ ತುಳುಕಲಿ
ಬೇವು ರಹಿತ ಬೆಲ್ಲವನ್ನು
ದಿನವೂ ಸವಿಯುತಲಿರಲಿ //

-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ