ಬಾಗಲಕೋಟೆ, ಮಾ.22: ಜಿಲ್ಲೆಯ ಹುನಗುಂದ ಕನ್ನಡ ಲೇಖಕರ ಪರಿಷತ್ತು ಹಾಗೂ ಕರ್ನಾಟಕ ಹಾಯ್ಕು ಪರಿಷತ್ತಿನ ಸಹಯೋಗಗದಲ್ಲಿ ಬುಧವಾರ ನಡೆದ ಅರ್ಥಪೂರ್ಣ ‘ಬೇವು ಬೆಲ್ಲ’ ಹಾಯ್ಕು ಓದು, ಸತ್ಕಾರ ಕಾರ್ಯಕ್ರಮ ಗಮನ ಸೆಳೆಯಿತು. ಕೊಪ್ಪಳ ಜಿಲ್ಲೆ ಇಟಗಿಯ ಉಪನ್ಯಾಸಕ ಹಾಯ್ಕು ಕವಿ ಗಂಗಾಧರ ಅವಟೇರ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಹಾಯ್ಕು ಕವಿ ಸಿದ್ದಲಿಂಗಪ್ಪ ಬೀಳಗಿಯವರು ಅಧ್ಯಕ್ಷತೆ ವಹಿಸಿದ್ದರು. ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ ಅತಿಥಿಗಳಾಗಿದ್ದರು.
ವ್ಯಾಸತೀರ್ಥ ಜೋಶಿ, ಎಸ್ಕೆ.ಕೊನೆಸಾಗರ, ಶರಣಪ್ಪ ಹೂಲಗೇರಿ, ಯೋಗೇಶ ಲಮಾಣಿ, ಚನ್ನಬಸಪ್ಪ ಲೆಕ್ಕಿಹಾಳ, ಪ್ರೇಮಾ ಕಾಟನಾಯಕ, ಡಾ.ಶಿವಗಂಗಾ ರಂಜಣಗಿ, ಅಶೋಕ ಬಳ್ಳಾ, ಎಚ್. ಎಸ್.ಗೌಡರ, ತಿರುಪತಿ ಶಿವನಗುತ್ತಿ, ಯಶವಂತ ಜೋಶಿ, ಡಾ.ಮುರ್ತುಜಾ ಒಂಟಿ, ಇಂದುಮತಿ ಪುರಾಣಿಕ ಹಾಯ್ಕು ವಾಚನ ಮಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಡಾ.ನಾಗರತ್ನಾ ಭಾವಿಕಟ್ಟಿ, ಇಂದುಮತಿ ಪುರಾಣಿಕರನ್ನು ಸತ್ಕರಿಸಿ ಗೌರವಿಸಲಾಯಿತು.
ಗುಂಡಣ್ಣ ದೇಶಪಾಂಡೆ, ವಿಜಯಕುಮಾರ ಕುಲಕರ್ಣಿ, ಅರುಣ ದುದ್ಗಿ, ದಾನೇಶ್ವರಿ ಸಾರಂಗಮಠ, ಬಿ.ಎಸ್.ಬನ್ನಟ್ಟಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.