ನಾಡೋಜ ಬೆಳಗಲ್ಲು ವೀರಣ್ಣನವರಿಗೆ ಕಾವ್ಯ ನಮನ
ಮುಖದಲ್ಲಿ ಸದಾ ಮಂದಹಾಸ
ಅರಳಿದ ಕಣ್ಣಿನಲ್ಲಿ ಕಲೆಯ ವಿಲಾಸ
ಹೃದಯವದು ಸದುವಿನಯದ ನಿವಾಸ
ಬೆಳಗಲ್ಲು ವೀರಣ್ಣ ಎಂಬುದೇ ಇವರ ವಿಳಾಸ
ಶಿಸ್ತು ಸಂಯಮ ಸಮಯ ಪಾಲನೆ
ನಿತ್ಯವೂ ಸಾಹಿತ್ಯ ಸಂಗೀತ ಆರಾಧನೆ
ಮೈ ಮನೆಗಳಲ್ಲಿ ತುಂಬಲು ಕಲೋಪಾಸನೆ
ಗುರು ಚಂದ್ರಯ್ಯರೇ ವೀರಣ್ಣರಿಗೆ ಪ್ರೇರಣೆ
ತೊಗಲುಗೊಂಬೆ ಕುಣಿಸಿದರು ಕಲೆಯ ಪೋಷಿಸಿ
ಹಳೆಯ ಸೂಜಿಗೆ ಹೊಸತನದ ದಾರ ಪೋಣಿಸಿ
ಕಲೆಯ ಕೌದಿ ಹೊಲಿದರು ಪ್ರೇಕ್ಷಕರ ಮನ ತಣಿಸಿ
ದೇಶ ವಿದೇಶಗಳ ಸುತ್ತಿದರು ಕಲಾ ದೇವಿಯ ಒಲಿಸಿ
ನಾಡೋಜ ಪದವಿಗೆ ಭಾಜನ ಕಲಾಧೀಮಂತ
ಕಡಲಾಚೆಗೂ ಕಲೆಯ ಬೆಳಗಿದ ಪ್ರತಿಭಾವಂತ
ನೋವ ನುಂಗಿ ನಗುವ ಹಂಚಿದ ಶ್ರೀಮಂತ
ಸಕ್ಕರೆ ಮಾತಿನ ಅಕ್ಕರೆ ಮನಸಿನ ಕಲಾವಂತ
ನುಡಿದಂತೆ ನಡೆದರು ಜೀವವಿರುವ ತನಕ
ನಾಡು ನುಡಿ ಸೇವೆಗೈದರು ನಿನ್ನೆಯ ತನಕ
ಕಲಾರಂಗ ಎಂದೂ ಮರೆಯದ ಸ್ನೇಹ ಜೀವಿ
ಕಲಾವಿದರ ಹೃದಯದಿ ನೆಲೆಸಿಹ ಚಿರಂಜೀವಿ
-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ *****