ದೇಶಿಯ ಕಲೆಯನ್ನು ಉಳಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು – ಟಿ ಹೆಚ್ ಎಂ ಬಸವರಾಜ

ಬಳ್ಳಾರಿ, ಏ.5: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ನ    7ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ರಾಘವ ಕಲಾ ಮಂದಿರದಲ್ಲಿ  ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಈಚೆಗೆ  ಜರುಗಿದವು.                          ಸುಗಮ ಸಂಗೀತ ಶ್ರೀಮತಿ ಕವಿತಾ ಡಿ. ಕಗ್ಗಲ್ ತಂಡದವರಿಂದ. ಸಮೂಹ ನೃತ್ಯ.ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ, ವಚನ ಗಾಯನ ಕೆ.ಜಿ .ಶಿವಕುಮಾರ್ ತಂಡದಿಂದ ‘ಕುಮಾರಗೌಡ ಅಮರಾಪುರ . ಪಿ.ಸಣ್ಣ ಹೊನ್ನೂರ್ ಸಾಬ್ ಶಂಕರ ಬಂಡೆ ಇವರಿಂದ ತತ್ವಪದ ಹಾಡುಗಳನ್ನು ಹಾಡಿದರು. ಸೀತಾಪಹರಣ ಬಯಲಾಟ ಪ್ರದರ್ಶನ ಧಾತ್ರಿರಂಗ ಸಂಸ್ಥೆ ಸಿರಿಗೇರಿ ವತಿಯಿಂದ ಮತ್ತು ಹೆಚ್ ತಿಪ್ಪೇಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.                ಸಾಧಕರಿಗೆ ಸನ್ಮಾನ:    ರಕ್ತ ದಾನಿ ದೇವಣ್ಣ ,  ಸಂಗೀತ ಶಿಕ್ಷಕಿ ಮಾರಿ ಸಾಯಿ ಶೃತಿ ಹಂದ್ಯಾಳ್, ಬಯಲಾಟ ಮಾಸ್ತರ್ ಈ ಹನುಮಾವದೂತ,  ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಟಿ ನಾಗಭೂಷಣ ಮತ್ತು ಧಾತ್ರಿರಂಗ ಸಂಸ್ಥೆಯ ಮುಖ್ಯಸ್ಥ. ವೈ ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ  ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ ಹೆಚ್. ಎಂ. ಬಸವರಾಜ ಅವರು ಮಾತನಾಡಿ. ಬಳ್ಳಾರಿ ಜಿಲ್ಲೆಯಲ್ಲಿ ಮಹಾನ್ ಕಲಾವಿದರು ಸಾಧಕರಿದ್ದಾರೆ. ಎಲೆಮರೆಕಾಯಿಯಂತಿರುವ,  ಮುಖ್ಯ ವಾಹಿನಿಗೆ ಬಾರದೆ ಇರುವ ಸಾಧಕರನ್ನು  ಆಲಾಪ್ ಸಂಗೀತ ಕಲಾ ಟ್ರಸ್ಟ್  ಗುರುತಿಸಿ ಸನ್ಮಾನ ಸಲ್ಲಿಸುವುದು ಹೆಮ್ಮೆಯ ಸಂಗತಿ ಎಂದರು.  ಕಲಾವಿದರ ಮಾಶಾಸನ 2000. ಬದಲು 5000 ಸಾವಿರಕ್ಕೆ ಏರಿಕೆಯಾಗಬೇಕು ಕಲಾವಿದರ ಮಾಶಾಸನ ವಯೋಮಿತಿ ಕಡಿಮೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ  ನಾಡೋಜ ಬೆಳಗಲ್ಲು ವೀರಣ್ಣ ,  ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೋಟೇಶ್ವರರಾವ್,  ಪದಾಧಿಕಾರಿಗಳಾದ  ರಮೇಶ್ ಗೌಡ ಪಾಟೀಲ್,  ಎನ್. ಪ್ರಕಾಶ,  ಬಯಲಾಟ ಕಲಾವಿದ ಜಿ .ನಾಗನಗೌಡ ಭಾಗವಹಿಸಿದ್ದರು.     ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ  ಎಚ್ ತಿಪ್ಪೇಸ್ವಾಮಿ ಮಾತನಾಡಿ,  ಬಳ್ಳಾರಿ ಜಿಲ್ಲೆಯ ಬಯಲಾಟ ಸಾಹಿತ್ಯ ಪದ ಬಳಕೆಯಲ್ಲಿ ರಾಜ್ಯದಲ್ಲಿ 23 ಜಿಲ್ಲೆಗಳ ಪೈಕಿ ಉತ್ತಮ ಮಟ್ಟದಲ್ಲಿದೆ.ಕುಡಿತಿನಿ ನರಸಿಂಗರಾಯರು,  ಸಿಡಿಗಿನ ಮಳೆ ಬೆಳೆಸಿದ್ದಪ್ಪ. ರಾಮಸಾಗರ ಸಾಲಿ ವೆಂಕಣ್ಣಯ್ಯ. ಮುಂತಾದ ಬಯಲಾಟ ಕವಿಗಳ ನೆನೆದು ಅವರು ರಚನೆ ಮಾಡಿದಂತ ಬಯಲಾಟ ಕೃತಿಗಳು. ಮತ್ತು ಪದ ಬಳಕೆಯ ಮಹತ್ವ ವಿವರಿಸಿದರು.  ಜಡೇಶ ಎಮ್ಮಿಗನೂರು ಪ್ರಾರ್ಥಿಸಿದರು. ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ  ಸ್ವಾಗತಿಸಿದರು. ಟಿ ನಾಗಭೂಷಣ್  ನಿರೂಪಿಸಿ ವಂದಿಸಿದರು. ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ,ಡಿ. ಸುಬ್ಬಣ್ಣ ,ಎಂ ರಾಮಾಂಜನೇಯಲು,ಹೆಚ್ ವಿಷ್ಣುವರ್ಧನ್ ರೆಡ್ಡಿ, ವಿ ರಾಮಚಂದ್ರ, ಕೆ ಕೃಷ್ಣ, ಕೆ ರಂಗಸ್ವಾಮಿ,ಅಡವಿ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.