ಗಂಗಾವತಿ, ಏ.14:ನಗರದ ದಂತ ವೈದ್ಯ ಡಾ.ಶಿವಕುಮಾರ್ ಮಾಲಿಪಾಟೀಲ್ ಅವರ “ನನ್ನ ಮತ ಮಾರಾಟಕ್ಕಿಲ್ಲ” ಕೃತಿಯನ್ನು ಡಾ. ಅಂಬೇಡ್ಕರ್ ಜಯಂತಿ
ಕಾರ್ಯಕ್ರಮದಲ್ಲಿ ಗಣ್ಯರು ಬಿಡುಗಡೆ ಮಾಡಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಯ ಮುಂದೆ ಚುನಾವಣಾ ಅಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ,ತಹಶೀಲ್ದಾರಾದ ಮಂಜುನಾಥ ಹಿರೇಮಠ ,ಡಿವೈ ಎಸ್ ಪಿ ಎಸ್.ಶೇಖರಪ್ಪ , ನಗರಸಭೆಯ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಮತ್ತಿತರ ಅಧಿಕಾರಿಗಳು ಲೋಕಾರ್ಪಣೆ ಗೊಳಿಸಿದರು.
ಮತದಾನದ ಮಹತ್ವ, ಅರಿವು ಮೂಡಿಸುವ ಹಾಗೂ ಪಾರದರ್ಶಕ ಆಡಳಿತಕ್ಕೆ ಪವಿತ್ರ ಮತದಾನ ಎಂಬ ಅಡಿ ಶೀರ್ಷಿಕೆಯ ಕೃತಿಯ ಬಗ್ಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ತಹಶೀಲ್ದಾರ ಮಂಜುನಾಥ ಅವರು ಮಾತನಾಡಿ ಚುನಾವಣೆಯ ಸೂಕ್ತ ಸಮಯದಲ್ಲಿ ಅತ್ಯಂತ ಉಪಯುಕ್ತ ಪುಸ್ತಕವನ್ನು ಡಾ.ಶಿವಕುಮಾರ್ ಅವರು ರಚಿಸಿದ್ದಾರೆ. ಪ್ರತಿಯೊಬ್ಬರೂ ಓದಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಹಾಸ್ಯ ಭಾಷಣಕಾರ ಗಂಗಾವತಿ
ಪ್ರಾಣೇಶ ಅವರು, ಮತದಾನ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಇಂತಹ ಪುಸ್ತಕ ಪ್ರಕಟವಾಗಿರುವುದು ವಿಶೇಷ. ಬಂದಿದ್ದು ವಿರಳ. ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿ, ಪ್ರಾಮಾಣಿಕರನ್ನು ಆಯ್ಕೆ ಮಾಡಿದರೆ ಕೃತಿಕಾರರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸಾಹಿತಿ ಡಾ.ಶರಣ ಬಸಪ್ಪ ಕೋಲ್ಕಾರ್ ಅವರು ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಅಕ್ರಮ ಭ್ರಷ್ಟಾಚಾರ ಮಟ್ಟಹಾಕಲು ಹಲವಾರು ಚಿಂತನೆಗಳು ಈ ಪುಸ್ತಕದಲ್ಲಿವೆ ಎಂದರು.
ಹಾಸ್ಯ ಭಾಷಣಕಾರ
ನರಸಿಂಹ ಜೋಶಿ ಮಾತನಾಡಿ, ಶ್ರೇಷ್ಠ ಸಂವಿಧಾನ ಬಲಪಡಿಸಲು ಪವಿತ್ರ ಮತದಾನ ಅತ್ಯಗತ್ಯ ಎಂದರು.
ಗ್ರಾಮೀಣ ಠಾಣೆಯ
ಇನ್ಸ್ಪೆಕ್ಟರ್ ಎಸ್.ಮಂಜುನಾಥ , ಕಸಾಪ ಅದ್ಯಕ್ಷ ಶ್ರೀನಿವಾಸ್ ಅಂಗಡಿ , ಗ್ರಾಮೀಣ ರೇಡಿಯೋ ನಿರ್ದೇಶಕ ರಾಘವೇಂದ್ರ ತೂನಾ , ವಕೀಲರಾದ ಆಶ್ಮುದ್ದಿನ್ ,
ಮಲ್ಲೇಶಪ್ಪ,
ಬಸವಕೇಂದ್ರದ ಅದ್ಯಕ್ಷ ಕೆ.ಬಸವರಾಜ ,ಬಸವದಳದ ಅದ್ಯಕ್ಷ ದಿಲೀಪ್, ಕದಳಿ ಮಹಿಳಾ ಸಂಸ್ಥೆಯ ಅದ್ಯಕ್ಷೆ ಸಿ.ಮಹಾಲಕ್ಷ್ಮಿ ಕೆಸರಟ್ಟಿ, ವೀರೇಶ, ಮೈಲಾರಪ್ಪ ಬೂದಿಹಾಳ, ರಾಮನಾಥ ಭಂಡಾರ್ಕರ್, ಕವಿ ರಮೇಶ ಗಬ್ಬೂರ್, ಚಿದಾನಂದ ಕೀರ್ತಿ, ಹರನಾಯಕ,ಪ್ರಹ್ಲಾದ್ ಕುಲಕರ್ಣಿ, ವಿಷ್ಣುತೀರ್ಥ,ಸೋಮಪ್ಪ ಜಂಬಗಿ,ಮಂಜುನಾಥ ಹೊಸ್ಕೆರಾ,
ವಿನಯ ಕುಮಾರ್ ಅಂಗಡಿ
ಮತ್ತಿತರರಿದ್ದರು.
******