ಅನುದಿನ ಕವನ-೮೪೪, ಕವಿಯಿತ್ರಿ: ಡಾ. ಸುಜಾತ. ಸಿ, ವಿಜಯಪುರ

ಎಲ್ಲೊ ದೂರದಲ್ಲಿದ್ದ
ನಿನ್ನ ಉಸಿರಿನ‌ ಸದ್ದಿಗೆ
ಮನ ಮುದಗೊಂಡಿದೆ ಇನಿಯ
ಮಖಚಹರೆ ಒಟ್ಟಾಗಿಸಿ
ಸರಿಗಮಪದನಿಸ ಸ್ವರ
ಹೊರಡಿಸಲುನುವಾಗಬೇಕಿದೆ
ಆದರೆ ಏನು ಮಾಡಲಿ
ತಡಕಾಡಿದಷ್ಟು ತೊಡಕಾಗುತ್ತಿವೆ
ಕಣ್ಣಿದುರಿಗಿದ್ದ ವಿರಹದ ಬೆರಳಕ್ಷರಗಳು
ಏನೊ ಹೇಳುವ ಭರದಲಿ
ಕೊಳಲು ನಾದ ಉರುಳಾಗಿ
ಹೊರಳಾಡಿಸಿ ಗಹಗಹಿಸಿ
ನಿನ್ನಂತೆ ಥೇಟ ನಿನ್ನಂತೆ
ನಕ್ಕಂತಿದೆ
ನೋಡಿ ನಲಿದವರು
ಕೈಸೇರಿಸಿ ತೊರಬೆರಳು
ಮುಂದುಚಾಚಿದಾಗ
ಹಿಡಿಹಸ್ತವ ನುಂಗಿದ್ದು
ನಿನ್ನಂತೆ ಚಪ್ಪಾಳೆ
ತಟ್ಟಿದ ಚಳ್ಳಮ್ಮ ಚಳ್ಳಮ್ಮ
ಎಂದು ಕಿವಿ ಊದೂತಿದೆ
ಸರಿದಾರಿ ನಿನ್ನೊಟ್ಟಿಗೆ
ನಡೆದವಳಿಗೆ ನಡುವಿನಲ್ಲಿ
ನಿಲ್ಲಿಸಿ , ಹರಿವ ಗಾಳಿಗೆ
ಕವಿಯೊಡ್ಡಿನಿಂತೆ ಥೇಟ್
ಶಂಖದ ದ್ವನಿಗಾಗಿ
ಉಸಿರಿದ್ದನ್ನು ಮರೆತಂತೆ
ಊರ ಜನ ಸತ್ತ ಮೇಲೆ
ಅತ್ತಂತೆ ಹಂಗೆ ನಿನ್ನಂಗೆ
ಸಂಶಯದ ಪೀಟಿಲೂದಿ
ಥೇಟ್ ನಿನ್ನಂತೆ ಊರುಸುಟ್ಟಂತೆ
ಎಲ್ಲವೂ ಮುಗಿದೊದ ಮೇಲೆ
ಸುಂಕವಿಲ್ಲದ ದಾರಿ ಹಿಡಿದು
ವೀಣಿ ನುಡಿಸಲು ಸತ್ತಧ್ವನಿ
ಹಾದಿ ಬಿದಿಯಲ್ಲಿ ಹರಡಿ
ರೊದನ ಗೈದಂತೆ
ಥೇಟ್ ನಿನ್ನಂತೆ ಅಳುವವರ
ಕಣ್ಣಿರಿಗೆ ಮರುಗದ ಮರುಳನಂತೆ
ಏಳು ಸ್ವರ ಸೇರಿಸಲು
ಹೆಣಗಿದಂತೆ ಉತ್ಸಾಹದ
ಉಲ್ಲಾಸದ ಪ್ರೀತಿಗೆ
ಹಾತೊರಿದಂತೆ ಕೈಚಾಚಿ
ಜಗವ ಅಪ್ಪಿದಂತೆ
ಥೇಟ್ ನನ್ನಂತ ರಾಗವಿಲಾಸಿಯಂತೆ
ಸಾವಿರ ಮುಖದ ಮಂದಾರದಂತೆ
ಹೇಗೆ ಸಂಬಳಿಸಲಿ
ಭರದ ಈ ರಾತ್ರಿಯ ತವಕದಂತೆ


-ಡಾ.ಸುಜಾತಾ.ಸಿ, ವಿಜಯಪುರ
*****