ಶುಭ ವಿವಾಹ ಸಂಭ್ರಮದಲ್ಲಿ ಟಿ.ರೇಷ್ಮಾ ಮತ್ತು ವಿ.ಭರತ್ ಕುಮಾರ್

ಬಳ್ಳಾರಿ, ಏ.30: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಸುರೇಶ್ ಮತ್ತು ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಟಿ.ಆರ್ ಸುಮಾ ಅವರ ಪುತ್ರಿ ಟಿ.ರೇಷ್ಮಾ ಅವರ ವಿವಾಹವು ಏ.30ರಂದು ಭಾನುವಾರ ನಗರದ
ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ
ಶ್ರೀಮತಿ ಶಶಿಕಲಾ ಹಾಗೂ ವಿ.ಪ್ರಭಾಕರ ಗುಪ್ತ ಅವರ ಪುತ್ರ ವಿ.ಭರತ್ ಕುಮಾರ್ ಅವರೊಂದಿಗೆ ಬಂಧು‌ಮಿತ್ರರು, ಕುಟುಂಬದ ಹಿತೈಷಿಗಳ ಸಮ್ಮುಖದಲ್ಲಿ ಹಿರಿಯರ ಆಶೀರ್ವಾದ ಕಿರಿಯರ ಹಾರೈಕೆಗಳೊಂದಿಗೆ ಸಂಭ್ರಮ, ಸಡಗರಗಳಿಂದ‌ ವಿಜೃಂಭಣೆಯಿಂದ ನಡೆಯಿತು.


ಶನಿವಾರ ಸಂಜೆ ಜರುಗಿದ ಅರತಕ್ಷತೆ ಹಾಗೂ ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತದ ಅಧ್ಯಕ್ಷ ಸಿರಿಗೆರೆ ಪನ್ನಾರಾಜ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್ ಸೇರಿದಂತೆ ವಿವಿಯ ನಿವೃತ್ತ ಪ್ರಾಧ್ಯಾಪಕ ಎಸ್. ಜಯಣ್ಣ, ಪ್ರಾಧ್ಯಾಪಕರು, ನಿವೃತ್ತ ಪ್ರಾಧ್ಯಪಕರು, ಸರಳಾ ದೇವಿ ಕಾಲೇಜಿನ‌ ಉಪನ್ಯಾಸಕರು, ನಗರದ ಗಣ್ಯರು, ವರ್ತಕರು, ಆರ್ಯ ವೈಶ್ಯ ಸಂಘದ ಗಣ್ಯರು,  ಉಪಸ್ಥಿತರಿದ್ದು ನವ ವಧು ವರರನ್ನು ಹರಸಿ ಹಾರೈಸಿದರು.


ಮಿನಿ ಸ್ನೇಹ ಸಮ್ಮಿಲನ: ನೂರಾರು ಬಂಧು ಮಿತ್ರರ ಜತೆ ಸುಮಾ ಅವರ 20ಕ್ಕೂ ಹೆಚ್ಚು ಕಾಲೇಜ್ ಸಹಪಾಠಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ 34 ವರ್ಷಗಳ ಬಳಿಕವೂ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿ ನವ ದಂಪತಿಯನ್ನು ಆಶೀರ್ವದಿಸಿದ್ದು ಗಮನ ಸೆಳೆಯಿತು.
ಬೆಂಗಳೂರು, ದಾವಣಗೆರೆ, ಹೊಸಪೇಟೆ, ಮುನಿರಾಬಾದ್, ಹಗರಿಬೊಮ್ಮನಹಳ್ಳಿ ಮತ್ತಿತರ ದೂರದ ಊರುಗಳಿಂದ ಬಂದಿದ್ದ ಹೊಸಪೇಟೆ ವಿಜಯನಗರ ಕಾಲೇಜಿನ (1984-89ರ ಸಾಲಿನ) ಸಹಪಾಠಿಗಳು ದಿನವಿಡೀ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಅತ್ತ ವಿವಾಹದ ಧಾರ್ಮಿಕ ವಿಧಿವಿಧಾನಗಳು ಶ್ರದ್ಧೆಯಿಂದ ‌ನಡೆಯುತ್ತಿದ್ದರೆ ಇತ್ತ ಒಂದೇ ಕಡೆ ತಮ್ಮ ಕುಟುಂಬದ ಸದಸ್ಯರ ಜತೆ ಕುಳಿತು ತಮ್ಮ ಕಾಲೇಜು ದಿನಗಳ ಸಂತಸದ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ಮೂರುವರೆ ದಶಕಗಳ ಬಳಿಕವೂ ಸಹಪಾಠಿಯೊಬ್ಬರ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿರುವುದನ್ನು ಕಂಡು ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು.                             ಶುಭ ಕೋರಿದವರು: ಹೊಸಪೇಟೆಯ ರಮೇಶ್ ಕಂಟ್ಲಿ ದಂಪತಿ, ಎಂ. ಶ್ರೀನಿವಾಸ ದಂಪತಿ, ಪ್ರಭುದೇವ ಜಾಲಿ ದಂಪತಿ,  ನಾಗರಾಜ ದಂಪತಿ, ಗುರುರಾಜ್, ಬೆಂಗಳೂರಿನ ಚಂದ್ರಶೇಖರ ಮಣ್ಣೂರು ಚಂದ್ರಿಕಾ ಮುರಳೀಧರ್, ಜಿ.ತಳವಾರ್, ದಾವಣಗೆರೆಯ ನಾಗರತ್ನ, ಅನಿತಾ ಮತ್ತು ಕುಟುಂಬ, ಹಗರಿಬೊಮ್ಮನಹಳ್ಳಿಯ ರೇಣುಕಾ‌ ದಂಪತಿ, ಕಿಶೋರ್,  ಮುನಿರಾಬಾದಿನ ಶೈಲಜಾ, ವಿಜಯಪುರದ ದಿಲ್ ಶಾದ್ ಬೇಗಂ, ಹೊಸಪೇಟೆಯ ತುಳಸಿ, ಆಶಾಗೀತಾ, ಬಳ್ಳಾರಿಯ ಎಎಂ ವಿಶಾಲ ಮತ್ತು ಸಿ. ಮಂಜುನಾಥ್ ದಂಪತಿ,

*****