ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ!

ಕ್ಷಣಿಕದಾಸೆ ಬೇಡ!

ಜನ ಮರುಳೊ ಜಾತ್ರೆ ಮರುಳೊ
ಒತ್ತಬೇಡಿ ಹಣವ ಪಡೆದು
ಪ್ರಜಾಪ್ರಭುತ್ವದಲ್ಲಿ ನಮ್ಮದೇ ಆಯ್ಕೆ ಇದು
ಆಸೆ ಆಮಿಷ ತೊಡೆದುಬಿಡಿ ಇಂದು ||

ಯಾವುದೇ ಪಕ್ಷದೊಳಿರಲಿ ನಿಷ್ಪಕ್ಷಪಾತ
ಪಾರದರ್ಶಕವಾಗಿರಬೇಕು ಈ ಸಮಾಜ
ಮತಗಳ ಮಾರಿಕೊಂಡ ಮನುಜ
ಯಾವತ್ತೂ ಗುಲಾಮಗಿರಿ, ಇದುವೇ ನಿಜ ||

ಒಂದು ದಿನದ ಕಾಸಿಗಾಸೆಪಟ್ಟರೆ
ಮತ್ತೆ ಕಾಯಬೇಕು ಮತದಾರ ಐದು ವರ್ಷ
ಹೆಂಡ ಸಾರಾಯಿಯ ಕುಡಿತದಲ್ಲಿ ಮುಳುಗಿ
ನೀನಾಗಬೇಡಾ ಅನ್ಯಾಯಕ್ಕೆ ದಾಸ ||

ಎಂಜಲಾಸೆಗೆ ಕಟ್ಟುಬಿದ್ದು
ತಂತ್ರಕ್ಕೆ ಸಿಲುಕಿದೆಯೋ, ಆಗುವೆ ನೀ ಅತಂತ್ರ
ನ್ಯಾಯ, ನೀತಿ, ಧರ್ಮದಲ್ಲಿ ನಡೆಯುತಿರು ಸದಾ
ಸಿಕ್ಕೇ ಸಿಗುವುದು ಸ್ಪಷ್ಟ ಸ್ವಾತಂತ್ರ್ಯ ||

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ