ಬುದ್ದ ಇದ್ದನಲ್ಲಿ
ಶಾಂತ ಚಿತ್ತನಾಗಿ ಕುಳಿತೆ ಇದ್ದ
ಊರ ಸಂತೆಯ ಮಧ್ಯೆ
ಗೊಜು ಕಿರುಚಲುಗಳ ಸದ್ದಿನಲ್ಲಿ
ಒಂದು ಮಾತನಾಡದೇ
ಮೌನದ ಆಭರಣ ತೊಟ್ಟು
ಅವನನ್ನು ನೋಡಿ
ಮುಂದಿನ ಪಯಣ
ಬೆಳೆಸಿದ್ದೊ ಬೆಳೆಸಿದ್ದೊ
ಬುದ್ದ ನಗುತ್ತಲೇ ಇದ್ದ
ಗಾಢ ಅಂದಕಾರವ ಕವಿದ
ಕಾರ್ಮೊಡವ ತೊಟ್ಟ
ಬಣ್ಣ ಬಣ್ಣದ ವೇಷಗಳ ಉಟ್ಟ
ಪರಾಗ ಪರಾಗ ಎಂದು ಘೊಷಣಿಯ ಕೊಟ್ಟವರ
ನೋಡುತ್ತ ಸುಮ್ಮನೆ ಕುಳಿತೆ ಇದ್ದ
ಹೌದು ಯಾಕೆ ಬುದ್ದ
ಮಾತನಾಡಲು ಒಲ್ಯೆ
ಏನಾದರೂ ಹೇಳುವದಿತ್ತಾ
ನಿನ್ನ ಈ ಮುಗುಳುನಗೆ
ಸಾವಿರ ಸಾವಿರ ಮಾತು ಸಾರುತಿದೆ
ಹೌದು? ಅತ್ತ ಬಂದಳುನೋಡು
ಕಿಸಾಗೌತಮಿ ಕೇಳು ಅವಳನ್ನು
ಹೇಳಿಯಾಳು ನಿನಗೆ ಏನನ್ನಾದರೂ
ಇತ್ತ ಬಂದ ನೋಡು
ಅಂಗುಲಿಮಾಲ ಕೊಟ್ಟಾನು ಪ್ರೀತಿ
ಕರುಣಿಯನ್ನು
ಅಯ್ಯೊ !
ಬೇಡವೇ ಬೇಡ ಲೊಕದ ಸಹವಾಸ
ಮೌನದಲ್ಲಿಯೇ ಸುಖಿಯಾನು
ಅಂತೇಲೇ ಇನ್ನು
ಪಯಣ ಬೆಳೆಸಿದ್ದೇನೆ
ಬೇಡಾ ತಥಾಗತ
ಒಮ್ಮೆಯಾದರೂ
ಮಾತನಾಡು ಜಗದ ಕರುಣಿ ನೀನು
ಮೌನ ಇದ್ದದ್ದೇ ಬೀಡು
ಊರ ತುಂಬ ಬೆಂಕಿಕೊಳ್ಳೆಗಳ
ಮೆರವಣಿಗೆ ಹೊರಟಿದೆ ನೋಡು
ಸಾವಿರದ ಮನೆಯ ಸಾಸುವೆ ತರಲಾಗದ
ಹತಭಾಗ್ಯಳು ನಾನು
ಒಮ್ಮೆ ಎದ್ದು ಬಾ
ಬೊಧಿಯ ವೃಕ್ಷವಾಗಿ
ನೆರಳಧಾರೆಯಾಗಿ
ಎಲ್ಲರನ್ನೂ ಸೋಕಿಸುಬಾ
ಬುದ್ದ ನಿನಿದ್ದರೆ ಎಲ್ಲವೂ ಸಿದ್ದ
-ಡಾ. ಸುಜಾತಾ ಸಿ, ವಿಜಯಪುರ
*****