ಕಾಡಿ ಆಡಿಕೊಳ್ಳುವ
ನೋವುಗಳ ಮೇಲೆಷ್ಟು
ಪ್ರೀತಿ ವ್ಯಾಮೋಹ
ತಿವಿದು ಹಾಕುವ
ನಿದ್ದೆ ಕೆಡಿಸುವ
ಇಲ್ಲದ್ದಲ್ಲದ ಕೀಟಲೇ ಮಾಡುವ
ಹೊರಳಾಡಿ
ಮಗ್ಗಲು ಬದಲಾಯಿಸಿ
ಎದ್ದು ಹೊರಡಲೊರಟರು ಬೆರಳು ಹಿಡಿಯುವ
ವಾಸ್ತವವಾಗಿ ಕುಳಿತು
ಮನಸ್ಸು ಭಿತ್ತರಿಸುವ ಇರಾದೆ
ಕಸಿದು ಅನ್ಯಮನಸ್ಕನನ್ನಾಗಿಸುವ
ಎಲ್ಲೂ ಇರದಂತೆ ಇರುವೆ
ಬಿಟ್ಟು ಒಳಗೊಳಗೆ ಸದಾ
ಬುಳಬುಳನೆ ಹರಿದು ಕಿರಿಕಿರಿಯಾಗಿಸುವ
ಇಷ್ಟೇಲ್ಲಾ ಹಿಂಸೆ ನೀಡಿದರೂ ಅದೇನೋ
ಮೋಹ ಮಾಯೆ
ಸಾಕಿಕೊಳ್ಳುತ್ತೇವೆ
ನೋವಿದ್ದರೆ ಬದುಕು ಎಂಬಂತೆ.
-ಲೋಕೇಶ್ ಮನ್ವಿತಾ, ಬೆಂಗಳೂರು
*****