ಅನುದಿನ ಕವನ-೮೮೬, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನಿಮ್ಮಂತೆ ನಾವು

🍀🌺💐ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು🍀💐

🌴 ನಿಮ್ಮಂತೆ ನಾವು🌴

ಕೊಡಲೀನs ಹಾಕಬ್ಯಾಡ
ಕರುಳಿಗೆ ನಮ್ಮ ಕೊರಳಿಗೆ
ಕೊಡಲೀನs ಹಾಕಬ್ಯಾಡ
ಕರುಳಿಗೆ ನಮ್ಮ ಕೊರಳಿಗೆ //

ನೀ ಕೊಡಲಿ ಹಾಕಿದರ
ನಮ್ಮ ಬದುಕಿಗೆ ಉಳಿಗಾಲವೆಲ್ಲಿ !?
ಬಳಗವೇ ನಾಶವಾದರೆ
ನಿಮ್ಮ ಉಸಿರು ಉಳಿಯುದೆಲ್ಲಿ ?
ಇನ್ನಾದರು ಅರಿತು
ನಡೆ ನೀ ಮನುಜ //

ಬದುಕ್ತೀವಿ, ಬೆಳೆತೀವಿ
ನಮ್ಮ ಪಾಡಿಗೆ ಬಿಟ್ಟು ಬಿಡು
ತೊಂದರೆಯ ಕೊಡದ್ಹಂಗ
ಜೀವದಾನವ ಮಾಡಿಬಿಡು
ಕಟುಕ ನೀ ಆಗದ್ಹಂಗ
ದಿಟವಾದ ಪ್ರೀತಿ ಕೊಡು //

ನಿಮ್ಮನೆಯ ಸೂರಿಗೆ
ನಮ್ಮಿಂದಲೇ ಕಿಟಕಿ, ಬಾಗಿಲು
ಆದರೂ ತೃಪ್ತಿಯಿಲ್ಲದ
ಮುಗಿಯದಾಯ್ತು ನಿಮ್ಮಯ ತೆವಲು
” ಮನೆಮುಂದೆ ಮರವಿರಲಿ
ಮನೆಗೊಂದು ಮಗುವಿರಲಿ ”
ಮಕ್ಕಳು ತೊರೆದರೂ
ನಾವಿರುವೆವು ಕೊನೆಯವರೆಗು //

ಆಸೆಗೆ ಮಿತಿಯಿಲ್ಲ
ಆಕಾಶಕ್ಕೆ ಎಣೆಯಿಲ್ಲ
ಎಲ್ಲೆ ಮೀರಿದರೆ, ನಿಮ್ಮ ಪೀಳಿಗೆಗೆ ಉಳಿಗಾಲವಿಲ್ಲ
ನಿಮ್ಮಂತೆ ನಾವು
ಕೊಡಬ್ಯಾಡರಿ ನೋವು
ಸ್ವಚ್ಛಂದವಾಗಿ ನಗಬೇಕು ನಾವು //

ಪರಿಸರದ ನಾಶಕ್ಕೆ
ಹೊಣೆ ನೀನೆ ಆಗಬ್ಯಾಡ
ಪಸರಿಸಲಿ ಹಸಿರಸಿರು
ಉಳಿದೀತು ನಿಮ್ಮಗಳ ಉಸಿರು
‘ ಆರೋಗ್ಯವೇ ಭಾಗ್ಯವೆಂದು ‘ ತಿಳಿದು
‌ ಕೊಡಲಿಯ ಕೆಳಗೆ ಇಡು,
ನಮ್ಮಂತೆ ನೀನೂ ಸದಾ ಖುಷಿಪಡು //

🌱🌱🌱🌱🌱🌱🌱🌱🌱🌱

-ಶೋಭಾ ಮಲ್ಕಿಒಡೆಯರ್ 🖊️
ಹೂವಿನ ಹಡಗಲಿ