ಅನುದಿನ ಕವನ-೮೯೩, ಕವಿಯಿತ್ರಿ: ಭಾರತಿ ಅಶೋಕ್ ಮೂಲಿಮನಿ, ಹೊಸಪೇಟೆ ಕವನದ ಶೀರ್ಷಿಕೆ:ಆದರೂ ಆಕ್ಷೇಪವೇಕೆ….????

ಆದರೂ ಆಕ್ಷೇಪವೇಕೆ….????

ನಾನಿಲ್ಲಿ ಬಂಧಿಯಾದರೂ
ಅನುಕ್ಷಣವೂ ಅಲ್ಲಿಯದೇ ತುಡಿತ.

ಧಮನಿಯ ಲಯದಲಿ ಬೆರೆತಿಹೆ
ಅನುಭವಿಸೊಮ್ಮೆ

ನಾಭಿಯ ಬಳಿ ಹೋಗು ಹೇಳುವುದೆಲ್ಲಾ
ಎಲ್ಲಿಹೆನೆಂದು,ಮಿಳಿತವಾಗಿಹೆನೆಂದು

ಕಂಗಳ ಬಿಂಬವೂ ಆನೆಂದು ಗುರುತಿಸೊಮ್ಮೆ
ಸದಾ ನಿಂದಿಹೆನಲ್ಲೇ…..

ಮಾತಿನ ಧ್ವನಿಗೆ ಏನೆಂದೇ
ಅದು ಹೇಳದೇ ತಾನೆಂದು

ಹೆಜ್ಜೆಯ ಗುರುತೊಮ್ಮೆ ಧ್ಯಾನಿಸು
ಹೇಳುವುದು ಬದ್ಧವಾಗಿಹೆನೆಂದು

ಶ್ವಾಸದ ವಾಯುವನ್ನೊಮ್ಮೆ ಕೆದಕು
ಅಣು ಅಣುವೂ ಒಂದಾಗಿಹೆ

ಮತ್ತೇಕೆ ಆಕ್ಷೆಪವೋ ಆನರಿಯೇ.
ಸೈರಿಸಿಬಿಡು ಇದೆಲ್ಲದರ ಪ್ರಮಾದವ


-ಭಾರತಿ ಅಶೋಕ್ ಮೂಲಿಮನಿ, ಹೊಸಪೇಟೆ
*****