ಬೈತಲೆಯ ಆಚೀಚೆ
ಹೆರಳು ಸರಿಯುವಂತೆ
ಮೋಡ ಸರಿದವು ಸಂಜೆ
ಡ್ರಮ್ಮಿನಲಿ ಕೆಂಡವುರುಬಿ
ಸರಳಿಗೆ ಸರ ಪೋಣಿಸಿದ
ಖಾರ ಮೆತ್ತಿದ ಮಾಂಸ
ಅರಳುತ್ತಿದೆ ಬೆಂಕಿಯಲಿ ಹೂವಾಗಿ
ಲಾಫ್ಟಿನಲಿ ಎತ್ತಿಟ್ಟ
ಪುರಾತನ ಮದಿರೆಯ
ಕುಡಿಕೆಗೆ ಸುರಿಯುವ ಕಾಲಕ್ಕೆ
ಚದುರಿದ ಮೋಡ ಒಗ್ಗೂಡಿ ಮಳೆ
ಈಗ ಕವಿತೆಯ ಸಾಲಿನಲ್ಲಿ
ನಟಿಸಿದ ಪದಗಳಿಗೆ
ನಿಜಗೊಳ್ಳುವ ಪರೀಕ್ಷೆ
-ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
*****