ಅನುದಿನ ಕವನ-೯೧೩, ಕವಿಯಿತ್ರಿ- ಮಾನಸಗಂಗೆ, ತಿಪಟೂರು

ಬೆಳದಿಂಗಳ ಊಟ ಮಾಡಬಹುದಷ್ಟೇ;
ನಿಮ್ಮಲ್ಲಿ ಯಾರೊಬ್ಬರೂ
ಚಂದ್ರನ ತಟ್ಟೆಗೆ ಕೈ ಹಾಕಲಾಗದು!!
***
ಮುಡಿದರು, ಬಾಡಿದರೂ
ಈ ಮಲ್ಲಿಗೆ ಅವನಿಗಷ್ಟೇ ಮೀಸಲು;
ನಿಮಗೆ ಸುವಾಸನೆಯೂ ಬೀರುವುದಿಲ್ಲ!!
***
ಕತ್ತಲಿದೆ ಎಂದ ಮಾತ್ರಕ್ಕೆ  ದಿಕ್ಕು ತಪ್ಪಿಸುವ
ವ್ಯರ್ಥ ಪ್ರಯತ್ನ ಮಾಡಬೇಡಿ;
ನಾನು ಹರ(ಅವ)ನಿಗಷ್ಟೇ
ದಕ್ಕಿದವಳು, ದಕ್ಕುವವಳು!!
*****
ನಾ ಹರಿವ ಹಾದಿ ಕಾಡೇ ಆಗಿದ್ದರು
ಕಡಲನ್ನೇ ಸೇರುವೆ.
ಅಣೆಕಟ್ಟು ಕಟ್ಟುವ ಅಗತ್ಯವಿಲ್ಲ.!!                                  *****

ನಾವಿಬ್ಬರು ಕಡಲಿಗಷ್ಟೇ ಒತ್ತುಕೊಟ್ಟೆವು;                 ದಡದಲ್ಲಿ ಸಿಕ್ಕ ಮುತ್ತುಗಳ ಲೆಕ್ಕ ಇಟ್ಟಿಲ್ಲ..

-ಮಾನಸ ಗಂಗೆ, ತಿಪಟೂರು

*****