ಅನುದಿನ ಕವನ-೯೧೪, ಕವಿಯಿತ್ರಿ: ನಾಗರತ್ನ, ಹೂವಿನ‌ ಹಡಗಲಿ, ಕವನದ ಶೀರ್ಷಿಕೆ:ನನ್ನ ಕವಿತೆ

ನನ್ನ ಕವಿತೆ

ಮೆಚ್ಚುಗೆ ಪಡೆಯಲಾರದು ನನ್ನ ಕವಿತೆ
ಹಸಿದವರ ಒಡಲಲ್ಲಿ ಕಣ್ಣೀರಿಡುತ್ತಿದೆ ನನ್ನ ಕವಿತೆ
ಸಮ ಸಮಾಜದ ಜೊತೆಗಿದೆ ನನ್ನ ಕವಿತೆ
ಪ್ರಚಾರದ ಹಂಗಿಲ್ಲ ನನ್ನ ಕವಿತೆಗೆ
ಈಗಿನ್ನೂ ಅಂಬೆಗಲಾಡುತ್ತಿದೆ ನನ್ನ ಕವಿತೆ
ಕೇಳುವ ಮನಗಳಿದ್ದರೆ ಸಾಕು ನನ್ನ ಕವಿತೆಗೆ
ಸಮಾಜ ಸುಧಾರಿಸುವ ಹಮ್ಮು ಬಿಮ್ಮು ನನ್ನ ಕವಿತೆಗಿಲ್ಲ
ನನ್ನ ನಾನು ಸುಧಾರಿಸುವಕೊಳ್ಳುವ ಶಕ್ತಿ ಕವಿತೆಗಿದೆ
ಕವಿತೆ ಚೆನ್ನಾಗಿದೆ ಎಂದು ಹೊಗಳಬೇಡಿ
ಕವಿ ಮತ್ತು ಕವಿತೆ ಇನ್ನೂ ಪಕ್ವವಾಗಿಲ್ಲ ಎಂದು –
-ತೆಗಳಬೇಡಿ
ಏಕೆಂದರೆ ನನ್ನ ಕವಿತೆಯನ್ನು ನಾನೇ ಮೆಚ್ಚಿಕೊಂಡಿಲ್ಲ
ಮೆಚ್ಚಿದರೆ ಮೆಟ್ಟಿಲು ಹತ್ತಲಿಕ್ಕಾಗದು
ನನ್ನ ಕವಿತೆ ಮೆಚ್ಚುಗೆ ಪಡೆಯಲಾರದು.

-ನಾಗರತ್ನ. ಹೂವಿನ ಹಡಗಲಿ.