ಸಮಾಜ ಸುಧಾರಣೆಗೆ ಶ್ರಮಿಸಿದವರು ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರು -ಶಿವಶಾಂತವೀರ ಶರಣರು

ಬಳ್ಳಾರಿ, ಜು. 16: ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತಲೇ ಆದರ್ಶ, ಜ್ಞಾನ ಮತ್ತು ತತ್ವಗಳಿಂದ ಜೀವನ ನಡೆಸಿದವರು ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರು ಎಂದು ಶಿವಶಾಂತವೀರ ಶರಣರು ತಿಳಿಸಿದ್ದಾರೆ.

ಬಸವಭವನದಲ್ಲಿ ಭಾನುವಾರ ನಡೆದ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 28ನೇ ಪುಣ್ಯಸ್ಮರಣೆ ಹಾಗೂ
1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಶ್ರೀ ಶಿವಶಾಂತವೀರ ಶರಣರ ತುಲಾಭಾರ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ಮಾಡಿದರು.

ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ ತತ್ವ ಮತ್ತು ಆದರ್ಶಗಳು ಸಮಾಜದ ಏಳ್ಗೆಗೆ, ಸಮಾಜವನ್ನು ತಿದ್ದಲಿಕ್ಕೆ ಹಾಗೂ ಸಮಾಜದ ಅಭಿವೃದ್ಧಿಗೆ ಸದಾ ಪೂರಕವಾಗಿವೆ. ಶರಣರ ತತ್ವಗಳನ್ನು ಪಾಲನೆ ಮಾಡುವ ಮೂಲಕ ಅವರ ಪುಣ್ಯಸ್ಮರಣೆಯನ್ನು ಪ್ರತಿಯೊಬ್ಬರೂ ಆಚರಿಸಬೇಕು ಎಂದರು.

ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರಲ್ಲಿ ಬದುಕನ್ನು ಬದಲಾಯಿಸುವ ಶಕ್ತಿ – ಚೈತನ್ಯ ಮತ್ತು ಮೌನದಲ್ಲಿ ಅಪಾರವಾದ ಶಕ್ತಿ ಇತ್ತು ಎಂದರು.

ಗೂಡೂರಿನ ಅನ್ನದಾನೀಶ್ವರ ಶಾಸ್ತ್ರಿಗಳು, ಶ್ರೀ ಚನ್ನವೀರ ಶರಣರು ಇತರಿಗಾಗಿ ಬದುಕಿದವರು. ಇತರಿಗಾಗಿ ಸ್ಪಂದಿಸಿದವರು. ಸನಾತನ ಸಂಸ್ಕøತಿಯ ಆಚರಣೆಯ ಮೂಲಕ ವ್ಯಕ್ತಿತ್ವ ಮತ್ತು ಸಮಾಜವನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ ಮಹಾನ್ ಚೇತನರು ಎಂದು ಪ್ರವಚನದಲ್ಲಿ ತಿಳಿಸಿದರು.

ಸಿದ್ದಾಪೂರದ ಶಿವಲಿಂಗಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕ ಭಾಷಣ ಮಾಡಿ, ಶ್ರೀ ಚನ್ನವೀರ ಶರಣರ ಬಾಲ್ಯ, ಸಾಧನೆ ಮತ್ತು ವಾಕ್‍ಸಿದ್ಧಿ, ತಪಃಶಕ್ತಿ ಮತ್ತು ಪವಾಡಗಳ ಕುರಿತು ಮಾತನಾಡಿದರು.

ಕಲ್ಲೂರುನ ಡಾ. ಪಂಡಿತ್ ದೊಡ್ಡಯ್ಯ ಗವಾಯಿಗಳು ಮತ್ತು ತಂಡ ಸಂಗೀತ ಸೇವೆ ಸಲ್ಲಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.

ತುಲಾಭಾರ ಸೇವೆ
ಪೂಜಾ ಮತ್ತು ಮೃತ್ಯುಂಜಯ ಭಾಬು, ಜುನ್ನಾ ಅಮೃತ, ಜುನ್ನಾ ಬಸವರೆಡ್ಡಿ, ಪ್ರೇಕ್ಷಾ ಮತ್ತು ಪ್ರೇಮ್ ಜುನ್ನಾ, ಡಿ. ರಾಜೇಶ್ವರಿ ಮತ್ತು ಡಿ. ನಾಗರಾಜ್, ಡಿ. ಧರಣಿ, ಟಿ. ಶಿವರಾಮ್, ಡಿ. ಸೋಮಶೇಖರ್, ಮಂಗಳಮ್ಮ ಅಕ್ಕಿ, ಜ್ಞಾನೇಶ್ವರ ಅಕ್ಕಿ ಮತ್ತು ಕುಟುಂಬ, ವೈ. ಕಗ್ಗಲ್‍ನ ಅಶೋಕ್ ಸಿದ್ದಾಪುರ ಮಠದ ಜಗದೀಶ್ವರಸ್ವಾಮಿ ಹಾಗೂ ಶಾರದಾ ಯಶೋದ ಕುಟುಂಬ, ಎಚ್.ಕಿರಣ, ಎಚ್.ಎನ್. ಗಿರೀಶ ಮತ್ತು ಡಾ. ಎಚ್.ಎನ್. ಶಿವಶರಣ, ಕಮ್ಮರಚೇಡುನ ಚಾವಡಿ ಸಣ್ಣರುದ್ರಗೌಡ ಅವರ ಸ್ಮರಣಾರ್ಥ ದೇವೀರಮ್ಮ ಮತ್ತು ಮಕ್ಕಳು, ಕಮ್ಮರಚೇಡುನ ಜಾನೆಕುಂಟೆ ರಾಜಮ್ಮ ತಿಪ್ಪೇರುದ್ರಪ್ಪ ಕುಟುಂಬ, ರೌಡಕುಂದ ಗ್ರಾಮದ ಬಸಮ್ಮ ಮತ್ತು ಉಗ್ರಾಣದ ಬಸಣ್ಣ ಅವರ ಕುಟುಂಬ, ಕೆ. ವಿಜಯಗಣೇಶ್ ಮತ್ತು ಕುಟುಂಬ, ಪಿ. ಚನ್ನವೀರಗೌಡ ಮತ್ತು ಕುಟುಂಬ, ರಾಯದುರ್ಗದ ಪೆರ್ಮಿ ಕಿರೀಟಪ್ಪ ಮತ್ತು ರಾಯದುರ್ಗದ ಶ್ರೀಮತಿ ಕರಿನಾಗ ಶೆಟ್ರು ಸುಮಂಗಳಮ್ಮ ಮತ್ತು ಕರಿನಾಗ ಶೆಟ್ರು ಚನ್ನಪ್ಪ ಮತ್ತು ಮಕ್ಕಳು, ಮೊಮ್ಮಕ್ಕಳು ತುಲಾಭಾರ ಸೇವೆ ಸಲ್ಲಿಸಿದರು.

—–