ಪ್ರಾಚಾರ್ಯ ಎಂ. ಮೋಹನ ರೆಡ್ಡಿ ನಿರ್ಭೀತ, ನೇರ, ನುಡಿಯ ವ್ಯಕ್ತಿತ್ವದಿಂದ ಜನಪ್ರಿಯರಾಗಿದ್ದರು -ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ

ಬಳ್ಳಾರಿ, ಜು.23: ನಗರದ ನೆಲ್ಲಚೆರವು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ ಎಂ. ಮೋಹನ ರೆಡ್ಡಿ ನಿರ್ಭೀತ, ನೇರ, ನುಡಿಯ ವ್ಯಕ್ತಿತ್ವ ಹೊಂದಿದ್ದರು ಎಂದು ಮಾಜಿ ಬೂಡಾ ಅಧ್ಯಕ್ಷ  ನಾರಾ ಪ್ರತಾಪರೆಡ್ಡಿ ಅವರು ಹೇಳಿದರು.
ಅವರು ಶನಿವಾರ ನಗರದ ಸೆಂಟನರಿ ಹಾಲ್ ನಲ್ಲಿ ಬಳ್ಳಾರಿ ಮತ್ತು ವಿಜಯನಗರ  ಜಿಲ್ಲಾ ಪದವಿ ಪೂರ್ವ ಪ್ರಾಚಾರ್ಯರ ಸಂಘ ಹಾಗೂ ಬಳ್ಳಾರಿ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಜರುಗಿದ ಪ್ರಾಚಾರ್ಯ ಎಂ.‌ಮೋಹನ ರೆಡ್ಡಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರೆಡ್ಡಿಜನ ಸಂಘದಲ್ಲಿ ಸಕ್ರೀಯನಾಗಿದ್ದ ಮೋಹನ ರೆಡ್ಡಿ ಅವರು ಸಂಘದ ಕಲ್ಯಾಣ ಮಂಟಪ ನಿರ್ಮಾಣಕ್ಕೆ  ತಮ್ಮ‌ ಒಂದು ತಿಂಗಳ ಸಂಬಳ ಲಕ್ಷ ರೂ.  ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದು ತಿಳಿಸಿದರು.
ಮೋಹನ ರೆಡ್ಡಿ ಅವರ ಹೆಸರು ಶಾಶ್ವತವಾಗಿ ಉಳಿಯಲು ಪ್ರಾಚಾರ್ಯರ ಸಂಘ ಮುಂದಾದರೆ ಆ ಸ್ಮಾರಕಕಕ್ಕೆ ತಮ್ಮ ಫ್ಯಾಮಿಲಿ ಟ್ರಸ್ಟ್ ನಿಂದ ಆರ್ಥಿಕ ನೆರವು ನೀಡಲು ಸಿದ್ಧ ಎಂದು ಪ್ರಕಟಿಸಿದರು.


ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಮಾತನಾಡಿ ಗುಲ್ಬರ್ಗಾದಲ್ಲಿ ಎಂ.ಕಾಂ ಓದುತ್ತಿದ್ದ ದಿನಗಳಿಂದಲೂ ಮೋಹನ ರೆಡ್ಡಿ ನನ್ನ ಸ್ನೇಹಿತರಾಗಿದ್ದರು. ನಿಕಟ ಒಡನಾಟವಿದ್ದರೂ ತಮ್ಮಿಂದ ಏನನ್ನೂ ಬಯಸುತ್ತಿರಲಿಲ್ಲ. ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದ ಮೋಹನ ರೆಡ್ಡಿ ಅವರ ಅಕಾಲಿಕ ನಿಧನ ತಮಗೆ ತೀವ್ರ ದುಃಖ‌ತಂದಿದೆ ಎಂದರು.
ಮುಖ್ಯ ಅತಿಥಿ ನಿವೃತ್ತ ಡಿಡಿಪಿಯು ನಾಗರಾಜಪ್ಪ ಅವರು ಮಾತನಾಡಿ  ನಿಷ್ಠುರ ವ್ಯಕ್ತಿದ ಮೋಹನ ರೆಡ್ಡಿ ತುಸು ಹೆಚ್ಚೇ ದೇಶಪ್ರೇಮಿಯಾಗಿದ್ದರು. ಮುನಿಸಿಪಲ್‌ ಕಾಲೇಜಿನ ಪ್ರಾಚಾರ್ಯರಾಗಿ ಬಳ್ಳಾರಿಗೆ ಬಂದಾಗ ರೆಡ್ಡಿ ಅವರೊಂದಿಗೆ ಒಡನಾಟವನ್ನು ಹಂಚಿ‌ಕೊಂಡರು.
ಜಿಲ್ಲಾ ಪ್ರಾಚಾರ್ಯರ ಸಂಘದ ಮುಖಂಡ ಶ್ರೀಶೈಲ ಅವರು ಮಾತನಾಡಿ,  ಮೋಹನ ರೆಡ್ಡಿ ಒಬ್ಬ ವ್ಯಕ್ತಿಯಲ್ಲ, ಶಕ್ತಿ, ಪ್ರಾಚಾರ್ಯರ ಸಂಘದ ಅಭಿವೃದ್ಧಿ ಗೆ ಶ್ರಮಿಸಿದರು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕಸಾಪದ ಜತೆ ನಿರಂತರ ಒಡನಾಟವಿಟ್ಟು ಕೊಂಡಿದ್ದ ಮೋಹನ ರೆಡ್ಡಿ ಅವರು ತಮ್ಮ ಸಹೋದರ ಪೊಲೀಸ್ ಗೋವಿಂದರೆಡ್ಡಿ ಅವರ ಸ್ಮರಣೆಯಲ್ಲಿ ದತ್ತಿನಿಧಿ‌ ಸ್ಥಾಪಿಸಿ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಅವರು, ಸ್ವಂತ ಗ್ರಾಮ ಗೊಲ್ಲಲಿಂಗಮನಹಳ್ಳಿಯ ಪರಿಸರ ಮೋಹನ ರೆಡ್ಡಿಯ ಮೇಲೆ ಪ್ರಭಾವ ಬೀರಿತ್ತು. ಹೀಗಾಗಿ ಗ್ರಾಮದ ಆದರ್ಶಗಳು ಈತನಲ್ಲಿ ಹಾಸು ಹೊಕ್ಕಾಗಿದ್ದವು ಎಂದು ಶ್ಲಾಘಿಸಿದರು.
ತನಗಾಗಿ ತಾನು ಜೀವಿಸುವನು ಆರಾಮ ಇರುತ್ತಾರೆ. ಬೇರೆಯವರ ಬಗ್ಗೆ ಕಾಳಜಿ ವಹಿಸುವವನು ಸಂಕಷ್ಟದಲ್ಲಿರುತ್ತಾನೆ ಎಂಬುದು ರೆಡ್ಡಿಯ ಬದುಕನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿದಿದೆ. ರಂಗಪ್ರೇಮಿಯಾಗಿ ಕಲೆ ಸಾಹಿತ್ಯ ರಂಗಭೂಮಿಗೆ ತಮ್ಮ ಇತಿಮಿತಿಯಲ್ಲಿ ಶ್ರಮಿಸುತ್ತಿದ್ದರು ಎಂದು ತಿಳಿಸಿದರು.
ಪ್ರಾಚಾರ್ಯರ ಸಂಘದ ನಿವೃತ್ತ ಅಧ್ಯಕ್ಷ  ಪ್ರಸಾದ ರೆಡ್ಡಿ ಮಾತನಾಡಿ ಉತ್ತಮ ಸಂಘಟಕರಾಗಿದ್ದ ಮೋಹನ ರೆಡ್ಡಿ ಅವರ ಅಗಲಿಕೆ ಸಂಘಕ್ಕೆ ತುಂಬಲಾರದ ನಷ್ಟ ಎಂದು  ವಿಷಾಧ ವ್ಯಕ್ತಪಡಿಸಿದರು.
ರಂಗ ಕಲಾವಿದರ ಪರವಾಗಿ ಮಾತನಾಡಿದ ಗೆಣಕಿಹಾಳ್ ತಿಮ್ಮನಗೌಡ, ಪಾತ್ರಗಳನ್ನು ಚೆನ್ನಾಗಿ ನಿಭಾಯಿಸುವರ ಪರವಾಗಿ ರೆಡ್ಡಿ ಅವರು ಸದಾ  ನಿಲ್ಲುತ್ತಿದ್ದರು. ತಮ್ಮ ಜತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು ಎಂದು ಸ್ಮರಿಸಿದರು.
ಚೈತನ್ಯ ಕಾಲೇಜುಗಳ ಸಮೂಹದ ಅಧ್ಯಕ್ಷ,  ಸರಕಾರಿ ಪ್ರಥಮ‌ ದರ್ಜೆ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ. ರಾಧಾಕೃಷ್ಣ ಅವರು ಮಾತನಾಡಿ ಮೋಹನ‌ರೆಡ್ಡಿ ಸಂಘಟನಾ ಚತುರರಾಗಿದ್ದರು. ಸದಾ ಸಮಾಜಕ್ಕೆ ತುಡಿಯುತ್ತಿದ್ದರು ಎಂದರು.
ನಿವೃತ್ತ ಮುಖ್ಯಗುರು ಎಂ. ಟಿ ಮಲ್ಲೇಶ್ ಅವರು‌ ಮಾತನಾಡಿ ರೆಡ್ಡಿ ಸಂಘ ಜೀವಿಯಾಗಿದ್ದರು ಎಂದು ತಿಳಿಸಿದರು.


ಗುಲ್ಬರ್ಗಾ ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ  ಪತ್ರಕರ್ತ ಸಿ.ಮಂಜುನಾಥ್ ಮಾತನಾಡಿ, ಕಾಲೇಜು ದಿನಗಳಲ್ಲೇ  ಮೋಹನ‌ರೆಡ್ಡಿ ಅವರಿಗೆ ನಾಯಕತ್ವ ಗುಣ ಇತ್ತು. ತೀವ್ರ ರಂಗಾಸಕ್ತಿ ಇದ್ದು ಹಲವು ಕಿರು ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದರು. 1985 ರಿಂದ 1988 ವರೆಗೆ ಮೂರು ವರ್ಷಗಳ ಕಾಲ ಹೊಸಪೇಟೆಯ ಕಾಲೇಜ್ ಬಿಸಿಎಂ ಹಾಸ್ಟೆಲ್ ನಲ್ಲಿ ಸಹಪಾಠಿಗಳಾಗಿದ್ದ ಸುಂದರ ದಿನಗಳನ್ನು ಸ್ಮರಿಸಿಕೊಂಡರು. ಜಾತ್ಯಾತೀತ ಮನೋಭಾವ, ಕಷ್ಟದಲ್ಲಿರುವರನ್ನು ಕಂಡಾಗ ಸ್ಪಂದಿಸುವ ಗುಣ ರೆಡ್ಡಿ ಅವರಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಇತ್ತು ಎಂದು ಹೇಳಿದರು.


ಅಧ್ಯಕ್ಷತೆ ಪ್ರಭಾರಿ ಡಿಡಿಪಿಯು ಮಾಧವರೆಡ್ಡಿ ಮಾತನಾಡಿ ರೆಡ್ಡಿ ಅವರ ಪರಿಸರ ಪ್ರೇಮ ಎಲ್ಲರಿಗೂ ಮಾದರಿ ಎಂದರು.
ನಿವೃತ್ತ ಪ್ರಾಚಾರ್ಯ, ಸಾಹಿತಿ ವೈ. ಹನುಮಂತರೆಡ್ಡಿ,
ಎನ್.ಜಿ.ಓ ಅಧ್ಯಕ್ಷ  ಶಿವಾಜಿ ರಾವ್ ,
ಎಸ್ ಜಿ ಜ್ಯೂನಿಯರ್ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ  ಲಿಂಗರಾಜ್ , ಉಪನ್ಯಾಸಕ ವೆಂಕಟೇಶ್, ಪಂಚಾಕ್ಷರಿ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೋಹನ ರೆಡ್ಡಿ ಅವರ ತಾಯಿ ಹನುಮಕ್ಕ ಅವರು ಸೇರಿದಂತೆ ಕುಟುಂಬದ ಸದಸ್ಯರು, ಬಂಧು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಎಸ್ ಎಸ್ ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಎ.‌ಹೇಮ ರೆಡ್ಡಿ, ಮುಖ್ಯ ಗುರು ಮೆಹತಾಬ್,ಸಂಡೂರಿನ ಪ್ರಾಚಾರ್ಯ ಶ್ರೀನಿವಾಸ್, ಉಪನ್ಯಾಸಕರಾದ ಯು. ಶ್ರೀನಿವಾಸಮೂರ್ತಿ, ಆಂಜನೇಯುಲು, ಪತ್ರಕರ್ತರಾದ ಗುರುನಾಥಂ, ಮಲ್ಲಿಕಾರ್ಜುನ್, ನಾಗಭೂಷಣ, ಕಲಾವಿದ ಅಮರೇಶಯ್ಯ, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ್ ಆಚಾರ್ ಇತರರು ಪಾಲ್ಗೊಂಡಿದ್ದರು.


ಕನ್ನಡ ಉಪನ್ಯಾಸಕ, ಲೇಖಕ ಎಎಂಪಿ  ವೀರೇಶಸ್ವಾಮಿ ಅವರು ನಿರೂಪಿಸಿ, ಎಂ. ಮೋಹನ ರೆಡ್ಡಿ ಅವರ ವ್ಯಕ್ತಿತ್ವ ಪರಿಚಯಿಸುವ ಕವನ ವಾಚಿಸಿದರು. ಲಿಂಗರಾಜು ಅವರು ಪ್ರಾರ್ಥಿಸಿದರು. ಬಳ್ಳಾರಿ ಜಿಲ್ಲಾ ಸರಕಾರಿ ಪಿಯು ಕಾಲೇಜ್ ಉಪನ್ಯಾಸಕರ ಸಂಘದ ಅಧ್ಯಕ್ಷ ಗುಡೆಕೋಟೆ ರಾಜಣ್ಣ ವಂದಿಸಿದರು.
—–