ಕುರುಗೋಡು, ಜು. 24: ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಿ. ಗೋವಿಂದಪ್ಪ ಉಪಾದ್ಯಕ್ಷರಾಗಿ ಕೆ.ಎಂ ಸರಸ್ವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಗ್ರಾಮದ ಗ್ರಾಪಂ ಕಚೇರಿಯ ಸಭಾಂಗಣದಲ್ಲಿ ಜರುಗಿದ ಚುನಾವಣೆಯಲ್ಲಿ ಹಾಜರಿದ್ದ ಸದಸ್ಯರು, ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ಬಳ್ಳಾರಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಪಿ.ಟಿ ಅವರು ಕಾರ್ಯನಿರ್ವಹಿಸಿದರು.
ಗ್ರಾಪಂ ಪಿಡಿಓ ಜುಬೇದ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಗ್ರಾಮದ ಗಣ್ಯರು, ಸದಸ್ಯರು ನೂತನ ಅಧ್ಯಕ್ಷ ಸಿ. ಗೋವಿಂದಪ್ಪ ಮತ್ತು ಉಪಾಧ್ಯಕ್ಷೆ ಕೆ ಎಂ ಸರಸ್ವತಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ನೂತನ ಅಧ್ಯಕ್ಷ ಸಿ. ಗೋವಿಂದಪ್ಪ ಮತ್ತು ಕೆ.ಎಂ ಸರಸ್ವತಿ ಅವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಜಿಲ್ಲೆಯ ಸಚಿವರು, ಕುರುಗೋಡು ಶಾಸಕರು, ಎಲ್ಲಾ ಗ್ರಾಪಂ ಸದಸ್ಯರು, ಊರಿನ ಮುಖಂಡರ ಮಾರ್ಗದರ್ಶನ ಪಡೆದು ರಾಜ್ಯ, ಕೇಂದ್ರದ ಸರಕಾರದ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಕೋಳೂರು ಗ್ರಾಪಂ ಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಲು ಪ್ರಯತ್ನಿಸುತ್ತೇವೆ ಎಂದರು.
—–