ಬಳ್ಳಾರಿ, ಜು.25: ವಿಜಯನಗರ ಜಿಲ್ಲೆ ಕಾರಿಗನೂರು ಬಳಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಗರದ ಗುಗ್ಗರಟ್ಟಿಯ ಉಮೇಶ್ ಹಾಗೂ ಅಂದ್ರಾಳ್ನ ಶಾಮೂ ಕುಟುಂಬಗಳಿಗೆ ಸರ್ಕಾರದ ಪರವಾಗಿ ತಲಾ ಎರಡು ಲಕ್ಷಗಳ ಪರಿಹಾರದ ಚೆಕ್ಕನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ವಿತರಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಶಾಸಕರಲ್ಲಿ ತೋಡಿಕೊಂಡರು. ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿದ ಶಾಸಕರು ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಕು.ತ್ರಿವೇಣಿ, ಉಪ ಮೇಯರ್ ಶ್ರೀಮತಿ ಜಾನಕಿ, ಬಳ್ಳಾರಿಯ ತಹಶೀಲ್ದಾರರು, ಪಾಲಿಕೆ ಸದಸ್ಯರಾದ ಜಬ್ಬಾರ್ ಸಾಬ್, ರಾಮಾಂಜನೇಯಲು, ಕಾಂಗ್ರೆಸ್ ಪಕ್ಷದ ಮುಖಂಡ ಕಮೇಲ ಡಿ.ಸೂರಿ, ಸಿ.ಡಿ. ಹೊನ್ನೂರು ಸ್ವಾಮಿ ಹಾಗೂ ಇತರೆ ಮುಖಂಡರು ಇದ್ದರು.