ನಾಲ್ಕು ಹನಿಗವನಗಳು
೧. ನೀನೇ…..
ಏನೆಂದು ಬರೆಯಲಿ
ನಿನ್ನ ನೆನೆದು
ಬಿಳಿ ಹಾಳೆಯಲ್ಲಿ ! ;
ಎಲ್ಲಾ ನೀನೇ
ಬರೆದಿರುವೆ
ನನ್ನ ಹೃದಯದಲ್ಲಿ.
೨. ಹುಡುಗಿ
ನನ್ನ ಹುಡುಗಿ
ಚಿನ್ನದ ಖನಿ
ಎಂದರಸಿ
ಬಂದರೆ
ಅವಳಾದಳು
ಮುಟ್ಟಿದರೆ ಮುನಿ.
೩. ನಿನ್ನ…..
ನಿನ್ನ
ಸುಂದರ ನಗುವಿಗೆ
ನಾನು
ಕೊಡುವುದೊಂದೇ
ಮುತ್ತು ;
ಚಿನ್ನದ ಸರ
ಕೊರಳಿಗೆ ಹಾಕಲು
ನನಗೀಗಿಲ್ಲ
ತಾಕತ್ತು.
೪. ತಳಮಳ
ನೀ ಬಳಿಯಿದ್ದರೆ
ಮೀಟುವುದು
ನನ್ನೆದೆಯಲ್ಲಿ
ನೂರೆಂಟು ತಾಳ ;
ನೀ ದೂರಾದರೆ
ಸಾಕು, ಮನಸ್ಸಿಗೆ
ಏನೋ ತಳಮಳ.
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ