ಕಣ್ಣೀರು ಸಾಲುತ್ತಿಲ್ಲ
ಅದೆಷ್ಟೋ ನಿನ್ನ ನೆನಪುಗಳು
ನನ್ನೆದೆಯಲಿ ಕಲ್ಲು ಬಂಡೆಗಳಂತೆ ಹಾಸುಹೊಕ್ಕಾಗಿದೆ
ತುಸು ಪಿಸು ಮಾತನಾಡದೆ
ಹಿಂದುರುಗಿ ನೋಡದೆ ಹೊರಟ ಗೆಳತಿಯೇ
ಕಣ್ಣ ರೆಪ್ಪೆಗೆ ತಗುಲಿದ ಕಸವನೊಮ್ಮೆ ಸರಿಸಿ ನೋಡು
ಪವಿತ್ರವಾದ ಭಾವನೆಗಳಲ್ಲಿ
ಬೆಳದಿಂಗಳು ಬೇರೂರಿ ಕುಳಿತಿದೆ……!!
ಆಸೆ ಕನಸುಗಳಿಲ್ಲದ ನನ್ನೆದೆಯ ಕವಿತೆಗೆ
ಬಣ್ಣದ ರೆಕ್ಕೆ ಪುಕ್ಕ ಕಟ್ಟಿ
ಬದುಕು ಅರಳುವ ಮುನ್ನ
ಮಣ್ಣಿನ ಚಿತೆಗೆ ಮನಸು ಮರುಳನಾಗಿದೆ
ಏನೋ ಆಗಿದೆ ನಾ ನಡೆಯುವ ಮುಂದಿನ ಹಾದಿಗೆ
ತುಸು ನೀ ತಿರುಗಿ ನೋಡಿದರೆ
ಇಬ್ಬರ ಬದುಕು ಬೆಳದಿಂಗಳೊತ್ತ ಪವಿತ್ರ ಮಲ್ಲಿಗೆ….!!
ನೀ ಕಟ್ಟಿ ಹೋದ ಕನಸುಗಳಿಗೆ
ಲೆಕ್ಕವಿಡಲು ಗಣಿತದ ಪುಸ್ತಕ ಬೇಕಿಲ್ಲ
ನೀ ಬಿತ್ತಿ ಹೋದ ಪವಿತ್ರದ ಪ್ರೀತಿಗೆ
ನೀರುಣಿಸಿ ಬೆಳೆಸಲು ಕಣ್ಣೀರು ಸಾಲುತ್ತಿಲ್ಲ….!
ಇನ್ನೇಗೆ ನೆನಸಿಕೊಳ್ಳಲಿ ನೀನಿಲ್ಲದ ಬದುಕನ್ನಾ….!
ಕವಿತೆಯೊಂದಿಗೆ ಮುಗಿಸಿ ಬಿಡಲೇ ಪವಿತ್ರ ಪ್ರೀತಿ ಸಂಬಂಧನಾ.….!!
-✍️ಮೂಗಪ್ಪ ಗಾಳೇರ, ಮಂಗಳೂರು
—–