ಬಳ್ಳಾರಿ, ಆ.1:ಸಮಾಜದ ಅಭಿವೃದ್ಧಿಯಲ್ಲಿ ಎನ್.ಜಿ.ಓಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಜಿಲ್ಲಾ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದರು.
ನಗರದ ಸನ್ಮಾರ್ಗ ಗೆಳೆಯರ ಬಳಗದ 8ನೇ ವಾರ್ಷಿಕೋತ್ಸವ ಹಾಗೂ ವಯೋ ನಿವೃತ್ತಿ ಹೊಂದಿರುವ ಮುಖ್ಯ ಗುರು ಮೆಹತಾಬ್ ಅವರ ಬೀಳ್ಕೊಡುಗೆ ಸಮಾರಂಭವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಜತೆ ಸಂಘ ಸಂಸ್ಥೆಗಳು ಸಮಾಜಕ್ಕೆ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಬಳಗ ಮಹತ್ವದ ಸಮಾಜಮುಖಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.
ದಾನಿಗಳಿಂದ ಸ್ವೀಕರಿಸಿ ನಿರ್ಗತಿಕರಿಗೆ ಬಟ್ಟೆ ವಿತರಣೆ, ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳು ಆಯೋಜಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಯುವ ಜನ ಸೇವಾ ಕ್ರೀಡಾ ಇಲಾಖೆ ಸಚಿವರ ವಿಶೇಷಾಧಿಕಾರಿ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಸೇವೆ ಅನ್ನುವುದು ಸುಲಭದ ದಾರಿ ಅಲ್ಲ. ಇಂತಹ ಕಷ್ಟದ ಹಾದಿಯನ್ನು ಸನ್ಮಾರ್ಗ ಗೆಳೆಯರ ಬಳಗ ಆಯ್ಕೆ ಮಾಡಿಕೊಂಡು ಮುನ್ನಡೆದಿರುವುದು ಅಭಿನಂದನಾರ್ಹ ಎಂದರು.
ಜಗತ್ತಿನಲ್ಲಿ ಶ್ರೀಮಂತ ಕೂಡಾ ದುಃಖದಲ್ಲಿರುವುದಕ್ಕೆ ಕಾರಣ ಸನ್ಮಾರ್ಗದಲ್ಲಿ ಇಲ್ಲದೆ ಇರುವುದು ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಕ, ವೈದ್ಯರು ಭ್ರಷ್ಟಗೊಳ್ಳದಿರುವತನಕ ಸಮಾಜ ಸೌಖ್ಯದಿಂದ ಇರುತ್ತದೆ ಎಂದ ಡಾ. ದಳವಾಯಿ ಅವರು
ಬಡ್ಡಿ ವ್ಯವಹಾರ ಮಾಡುವ ಶಿಕ್ಷಕರು ಇರುವುದು ದುರಂತ ಎಂದರು.
ಮಕ್ಕಳ ಸೇವೆ, ಪಾಠಮಾಡುವುದು ಧ್ಯಾನಮಾಡಿದಂತೆ ಎಂದು ಹೇಳಿದರು.
ನಿವೃತ್ತ ಮೆಹತಾಬ್ ಮಾತನಾಡಿ, ಮೂರು ದಶಕಗಳ ಹಿಂದೆ 200 ರೂ. ಸಂಬಳದಿಂದ ಆರಂಭವಾದ ನನ್ನ ಶಿಕ್ಷಕ ವೃತ್ತಿ ಸಂತೃಪ್ತಿ ನೀಡಿದೆ ಎಂದು ತಿಳಿಸಿದರು.
ಕುಸಿಯುತ್ತಿರುವ ಮೌಲ್ಯಗಳನ್ನು ಮಕ್ಕಳಲ್ಲಿ
ವೃದ್ಧಿಸಲು ಬಳಗ ವಿಶೇಷ ಆದ್ಯತೆ ನೀಡಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಮಾತನಾಡಿ, ಬಳಗ ಬಡಜನತೆಗೆ ನೆರವು ನೀಡುತ್ತಿದೆ. ಒಳ್ಳೆಯ ನಡತೆ, ಕೆಲಸಗಳ ಮೂಲಕ ಗಮನ ಸೆಳೆದಿದೆ. ನಿವೃತ್ತಿ ಬಳಿಕ ಬಳಗದ ಜತೆ ಕೈ ಜೋಡಿಸುವೆ ಎಂದು ತಿಳಿಸಿದರು.
ಬಿಇಓ ಪೂರ್ವ ವಲಯದ ಇಸಿಓ ಸಿ.ಡಿ ಗೂಳಪ್ಪ ಅವರು ಮಾತನಾಡಿ, ಬಳಗ ಶಿಕ್ಷಣ ಇಲಾಖೆ ಜತೆ ಕೈಜೋಡಿದೆ. ತಾಕೂಕಿನ ಸರಕಾರಿ, ಅನುದಾನಿತ ಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಕ್ರಮಗಳಲ್ಲಿ ಸಹಯೋಗ ನೀಡಿರುವುದನ್ನು ಸ್ಮರಿಸಿದರು.
ಪೂರ್ವ ವಲಯದ ಬಿಇಓ ನಯೀಮೂರ್ ರೆಹಮಾನ್, ಬಳಗದ ಉಪಾಧ್ಯಕ್ಷ ಎಂ.ಎಸ್. ಜಗದೀಶ್, ಹನುಮಂತರೆಡ್ಡಿ, ಚೈತನ್ಯ ಡಾ. ರಾಧಾಕೃಷ್ಣ, ಗೌರವ ಅಧ್ಯಕ್ಷ ನಿವೃತ್ತ ಆರ್.ಟಿ.ಓ ಪಂಪಾಪತಿ,ಡಾ.ಪರಸಪ್ಪ ಬಂದರಕಳ್ಳಿ ಮತ್ತಿತರರು ವೇದಿಕೆಯಲ್ಲಿ ಇದ್ದರು.
ಬಳಗದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಉಪನ್ಯಾಸಕ ಪುರುಷೋತ್ತಮ, ಸಿದ್ಧಲಿಂಗೇಶ್ವರ ಗದಗಿನ್, ಹರಿಪ್ರಸಾದ್, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ, ತಾಲೂಕು ಘಟಕಗಳು ಸೇರಿದಂತೆ ಹಲವು ಸಂಸ್ಥೆಗಳು, ನೂರಕ್ಕೂ ಹೆಚ್ಚು ಜನರು, ಹಿತೈಷಿಗಳು ಮೆಹತಾಬ್ ದಂಪತಿಗಳನ್ನು ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಚಿತ್ರ ಕಲಾವಿದ ಮಂಜುನಾಥ್ ಗೋವಿಂದವಾಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾಜಿ ರಾವ್, ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಕೊರ್ಲಗುಂದಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಕರ್ತ ಶಶಿಧರ ಮೇಟಿ ಸ್ವಾಗತಿಸಿದರು. ಬಳಗದ ಕಾರ್ಯದರ್ಶಿ ಚಂದ್ರಶೇಖರ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಗದ ಅಧ್ಯಕ್ಷ
ಗಾಯಕ ಜಡೇಶ ಎಮ್ಮಿಗನೂರು ಪ್ರಾರ್ಥಿಸಿದರು. ಇಂ.ವಿನೋದ್ ಎಂ. ನಿರೂಪಿಸಿದರು.
—–