ಅನುದಿನ ಕವಿತೆ-೯೪೬, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಕಪ್ಪು ಕವಿತೆ

ಕಪ್ಪು ಕವಿತೆ…

ನಮ್ಮ ಮೈ ಬಣ್ಣದ ಬಗ್ಗೆ
ಮಾತನಾಡುವ ಮೊದಲು
ನಿಮ್ಮ ಸುಟ್ಟುಕರಕಲಾಗಿರುವ
ಮನವ ತೊಳೆದು ಶುದ್ದಗೊಳಿಸಿಕೊಳ್ಳಿ…

ಹಾಗೆ ಹೃದಯವನ್ನು ಕೂಡ…

ತಲೆಯೊಳಗೆ ತುಂಬಿರುವ
ಮೌಡ್ಯದ ವಿಷವನ್ನು ಕೂಡ ಕಕ್ಕಿ-
ಕಕ್ಕಿ ಮಿದುಳನ್ನು ಕೂಡ
ತೊಳೆದು ಶುದ್ದಿಗೊಳಿಸಿಕೊಳ್ಳಿ…

ನಾವೋ ಮೊದಲೆ
ಈ ದೇಶದ ಮೂಲ ನಿವಾಸಿಗಳು
ನೀವೋ ಪರದೇಶಿಗಳು
ನಮ್ಮ ಚರ್ಮ ಕಪ್ಪಾದರೂ
ನಮ್ಮದು ಮೂಲ ನಾಗಕುಲ
ಭೀಮನ ಬುದ್ದ ನೆಲ
ನಮ್ಮ ಬಣ್ಣವೇ ನಮಗೆ ಶ್ರೇಷ್ಠ
ಬಿಳಿ ಜಿರಳೆಯಂತ ನೀವು
ನಮ್ಮ ಬಣ್ಣದ ಬಗ್ಗೆ
ವ್ಯಂಗವಾಡುವ ಮೊದಲು
ನಿಮ್ಮ ಕಣ್ಣುಗಳಲ್ಲೂ ಕೂಡ
ಶುದ್ದತೆ ತುಂಬಿಕೊಳ್ಳಿ…


-ಸಿದ್ದುಜನ್ನೂರ್, ಚಾಮರಾಜ ನಗರ
—–