ಲೇಪನ
ಮೌನ ಎಂಬ ಚಿನ್ನದೊಳಗಡೆ
ಎಷ್ಟು ಕುಲುಮೆಯ ಝಳವಿದೆ
ಧರಿಸಿದೆದೆಯಾ ಸುಪ್ತದೊಳಗಡೆ
ಅಳೆಯಲಾಗದ ಕೊಳವಿದೆ
ಆಡಲಾರದ ಮಾತುಗಳೆಲ್ಲ
ಹೆದರಿ ಮುದುರಿ ಕುಳಿತಿವೆ
ಯಾವವಕಾಶಕೆ ಕಾಯುತ್ತಿದ್ದವೋ
ಹಾರಿ ಹೋಗಿ ಬಿಟ್ಟಿವೆ
ಹೇಳಲಾಗದ ಕಥೆಗಳಿಗೆಲ್ಲ
ಯಾವ ದೈವ ಒಲಿಯಿತೋ
ಯಾವ ಸ್ವರದ ಸ್ನೇಹವಾಯಿತೋ
ರಾಗವಾಗಿ ಹರಿದಿವೆ
ಗಂಟಲು ಬಿಗಿದ ಮುಖಕೆ ಕೃತಕ
ಮಂದಹಾಸದ ಲೇಪವೂ
ಗಾಯ ಮಾದಿದೆ ಕಲೆಯವಾಸಿಗೆ
ಯಾವ ಮದ್ದಿದೆ ಬೇಕಿದೆ
ಯಾವುದೋ ಮಾಯೆಯ ಮಳೆಯಾಗಲಿ
ಪ್ರತಿ ಬಿಂಬಿಸಲಿ ಹೊಸತನ
ಪಾರದರ್ಶಕವಾಗಲಿ ಬೇಗ
ಎಲ್ಲ ಮಾನಸ ಸರೋವರ
-ನಿಂಗಮ್ಮ ಭಾವಿಕಟ್ಟಿ (ನಭಾ), ಹುನಗುಂದ