ಬೆಂಗಳೂರು, ಆ.10: ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಮತ್ತು ಅದರಿಂದ ಮಧ್ಯಮವರ್ಗದವರಿಗೆ ಹಾಗೂ ಬಡವರಿಗೆ ಆಗುತ್ತಿರುವ ಅನುಕೂಲವಾಗುತ್ತಿರುವ ಹಿನ್ನಲೆಯಲ್ಲಿ ಕನಕ ವಕೀಲರ ವೇದಿಕೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಿತು. ಕನಕ ವಕೀಲರ ವೇದಿಕೆ (ರಿ) ಯ ಪದಾಧಿಕಾರಿಗಳು ಮತ್ತು ಸದಸ್ಯರು ಬುಧವಾರ ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಕರ ಕುಶಲ ಕರ್ಮಿಗಳು ಸಿದ್ದಪಡಿಸಿದ್ದ ಬಸವಣ್ಣನವರ ಕಲಾಕೃತಿಯನ್ನು ಸಿಎಂ ಅವರಿಗೆ ಅರ್ಪಿಸಿದರು.
—–