ಅನುದಿನ‌ ಕವನ-೯೫೨, ಕವಿಯಿತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನಾಲ್ಕು‌ ಹನಿಗವನಗಳು

ನಾಲ್ಕು ಹನಿಗವನಗಳು

1. ನೂರು ಮಾತು

ನಿನ್ನ ನೋಟದಲ್ಲಿ
ನೂರು ಮಾತುಗಳ
ಸಾಮರ್ಥ್ಯ
ಅಡಗಿರುವಾಗ
ಹುಡುಗಿ‌  !
ನಾನು ಹತ್ತು ಮಾತನಾಡಿದರೂ
‌ವ್ಯರ್ಥವೆನಿಸುತ್ತಿದೆ
ನನಗೀಗ.

2. ಬಾಲೆ

ನಾನೊಂದು ಬಿಳಿಹಾಳೆ
ಅದರ ಮೇಲೆ
ಬರೆಯದಿದ್ದರೆ
ಏನು ಬೆಲೆ ? ;
ನೀನೊಂದು
ಸುಂದರ
ಕವನವಾಗಿ
ಮೂಡಿ ಬಾ ಬಾಲೆ.

3. ಸಾನಿಧ್ಯ

ನಲ್ಲೇ
ನೀ ಮನೆಯೊಳಿದ್ದರೆ
ಮನೆ ತುಂಬಾ
ಕಾಲಂದಿಗೆಯ  ಶಬ್ದ ;
ನೀನಿಲ್ಲದಿರೆ
ಜೊತೆಗೆ
ಮನೆ ಏನು
ಮನ ಕೂಡ ಸ್ತಬ್ಧ.

4. ವರ್ಣನೆ

ಹುಡುಗಿ
ಕವನದಲ್ಲಿ
ನಿನ್ನ ವರ್ಣಿಸಲು
ಪದಗಳ ಹುಡುಕುವೆ ;
ಎದುರಿಗೇ ನೀನಿರುವಾಗ
ನಿನಗೇಕೆ ವರ್ಣನೆ !?
ನನ್ನ ಕಣ್ಣಲ್ಲೇ
ನೀನಡಗಿರುವೆ.


-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****