ಬಯಲ ಬೆತ್ತಲು..
ನೆನಪಿನ ಗೂಡು
ಕಟ್ಟಿದ ಜೇನು
ಉಂಡು
ಸಿಹಿಯ ಮದವೇರಿ
ಕಂಡ ಕಂಡ
ಹೂವಿನ ಸವಿಯ
ಜರಿಯುತ
ಅಲೆದ ಅಲೆಮಾರಿಯ
ಅಮಲು ಇಳಿಯಲು
ಬಯಲಲಿ ಕಂಡ
ತುಂಬೆಯ ಚೆಲುವು
ದಾರಿಯ ದಣಿವ
ತುಸು ತಣಿಸಿ
ಮಬ್ಬು ಹಾದಿಯ
ಮಸುಕ ತೆರೆಯಲು
ನಿದ್ದೆ ಸರಿದ
ಕಣ್ಣ ತುಂಬಿದೆ
ಬಯಲ ಬೆತ್ತಲು !
-ಎಚ್.ಎನ್. ಈಶ ಕುಮಾರ್, ಮೈಸೂರು
*****