ನಾವು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಇದ್ದೇವೆ -ರಘೋತ್ತಮ ಹೊಬ, ಮೈಸೂರು

ಗೃಹ ಸಚಿವ ಡಾ.ಜಿ.ಪರಮೇಶ್ವರ್ ರನ್ನು ಸ್ನೇಹಿತರೊಬ್ಬರು ಟೀಕಿಸಿದ್ದಾರೆ. ಈ ನಿಟ್ಟಿನಲ್ಲಿ ಆ ಟೀಕೆ ಖಂಡಿತ ಒಪ್ಪತಕ್ಕದಲ್ಲ. ಯಾಕೆಂದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುಖಾ ಸುಮ್ಮನೆ ಈ ಮಟ್ಟಕ್ಕೆ ಏರಿದವರಲ್ಲ. ಒಂದು ರಾಜಕೀಯ ಪಕ್ಷದ ರಾಜ್ಯ ಅಧ್ಯಕ್ಷರಾಗಿ 2013 ರಲ್ಲಿ ಆ ಪಕ್ಷವನ್ನು ಅಧಿಕಾರಕ್ಕೆ ತಂದವರು ಪರಮೇಶ್ವರ್ ರವರು. ಅಂದಹಾಗೆ ಹಾಲಿ ಉಪೇಂದ್ರ ಪ್ರಕರಣ ಅದು ಕೇವಲ ರಾಜಕೀಯ ಇಚ್ಛಾಶಕ್ತಿಯ ಪ್ರಕರಣವಲ್ಲ. ಅದಕ್ಕೆ ಸಾಮಾಜಿಕ ಮತ್ತು ಆರ್ಥಿಕ ಆಯಾಮ ಇದೆ. ಉಪೇಂದ್ರ ಈ ಮಟ್ಟಕ್ಕೆ ಬೆಳೆದದ್ದು ಆರ್ಥಿಕ ಚಟುವಟಿಕೆಗಳ ಮೂಲಕ. ಅದಕ್ಕೆ ಕಾನೂನು ಕಡಿವಾಣ ಹಾಕಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಒಂದು ಕೋಟಿ ದಲಿತರು ಇದ್ದಾರೆ. ಅವರು ಜಾಗೃತರಾದರೆ ಉಪೇಂದ್ರ ರಂತಹ ಜಾತಿವಾದಿಗಳನ್ನು ಆರ್ಥಿಕವಾಗಿ ಮಟ್ಟ ಹಾಕಬಹುದು.

ಹ್ಞಾಂ, ಈ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಪರಮೇಶ್ವರ್ ರವರು ಮಾತಾಡಿಲ್ಲ ಎಂದಲ್ಲ. ಪರಮೇಶ್ವರ್ ಸಂಬಂಧಿತ ಆರೋಪಿಯನ್ನು ನಾನ್ ಸೆನ್ಸ್ ಎಂದಿದ್ದಾರೆ ಅಷ್ಟು ಸಾಕು ಆತ ಮತ್ತು ಆತನ ಜಾತಿಯ ಸೆನ್ಸ್ ಕುಗ್ಗಿಸಲು. ಇದರ ಜೊತೆಗೆ ಮಾಜಿ ಸಚಿವ ಎನ್.ಮಹೇಶ್ ಆರೋಪಿಯನ್ನು ಈಡಿಯಟ್ ಎಂದಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಅಷ್ಟೇ ತೀವ್ರವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಮಸ್ತ ದಲಿತರು ಉಪೇಂದ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಒಂದೆಡೆಯಾದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಲಿ ತಹಬಂದಿಗೆ ಬಂದಿದೆ, ನಿಯಂತ್ರಣದಲ್ಲಿದೆ. ಇದಕ್ಕೆ ಕಾರಣ? ಅಕ್ಷರಶಃ ಅದು ಸಚಿವ ಡಾ.ಜಿ.ಪರಮೇಶ್ವರ್ ರವರು. ಆದ್ದರಿಂದ ಡಾ.ಜಿ.ಪರಮೇಶ್ವರ್ ಸಮರ್ಥರು. ಅವರ ಸಮರ್ಥತೆ ನೋಡಿಯೆ ಅವರಿಗೆ ಆ ಖಾತೆ ನೀಡಲಾಗಿದೆ. ಆದ್ದರಿಂದ ಅವರ ವಿರುದ್ಧ ಯಾವ ಖ್ಯಾತೆ ಸಲ್ಲ, ಟೀಕೆ ಸಲ್ಲದು. ಒಟ್ಟಾರೆ ನಾವು ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಇದ್ದೇವೆ.           We are with Dr G. Parameshwar

-ರಘೋತ್ತಮ ಹೊಬ, ಮೈಸೂರು
—–