ಜಗವ ತೊರೆಯಬೇಕು
ನನ್ನ ಜಗದೊಳಗೆ ಉಳಿಯಲು
ಬದುಕೆಷ್ಟು ಗಲಾಟೆ
ಅದೆಷ್ಟು ನಿರಾಳ
ಒಮ್ಮೆ ಸುಂದರ ಗಾಳಿ
ಎಂದಿಗೋ ಒಮ್ಮೆ ಸುನಾಮಿ
ಮತ್ತೊಮ್ಮೆ
ಹಾಗೇ ಶಾಂತ ಸಮುದ್ರ
ತನ್ನವರೆಷ್ಟು ಹಿತ
ಅಷ್ಟೇ ಸುಡು ಅಗ್ನಿ
ಸುಧಾರಿಸಿಕೊಳ್ಳದ
ಮನಸ್ಸು
ಸಹಿಸಿಕೊಳ್ಳದ
ಮನಸ್ಸು
ಹೆಸರು ಕೇಳಿದರೆ ಸಾಕು
ಸಮಾಧಾನಿಸಿಕೊಳ್ಳುವ ಮನಸ್ಸು
ಏನಿದೆ ಹಿಂದೆ
ಒಮ್ಮೆ ತಿರುಗಿದರೆ
ತಪ್ಪು ಸರಿಗಳ ತುಲನೆಯಷ್ಟೇ
ದಿನದ ಹಾಳೆಯಲ್ಲಿ
ಕೆಂಪು_ನೀಲಿ ಗೀಟುಗಳು
ಕಿವಿ ಕೊಡದೆ
ಮನಸು ಇಡದೆ
ಜಗವೇ ಕಳೆದುಕೊಳ್ಳುವಾಗ
ಜಗದಲ ಹೃದಯವಿರುವವನ
ಸಾಗಿಬಿಡೋಣ
ತನ್ನ ಜಗವೊಂದನ್ನು
ಸೃಷ್ಟಿಸಿಕೊಂಡು
-ಲೋಕೇಶ್ ಮನ್ವಿತಾ, ಬೆಂಗಳೂರು
—–