ಸಖೀ
ನೂರು ಕನಸುಗಳು ಒಂದೇ ಸಲ
ನೆಲಕಪ್ಪಳಿಸಿದಾಗ
ಹೃದಯ ಚಿಲ್ ಎಂದು ಚೀರುತ್ತದೆ
ನೋವಿನ ಆದ್ರತೆಗೆ
ನೂರು ನಕ್ಷತ್ರಗಳು ಧರೆಗಪ್ಪಳಿಸಿದರೆ
ನೆಲದ ಎದೆ ಹೇಗೆ ತಡೆದೀತು
ನೆಲಕೆ ಬಿದ್ದ ನಕ್ಷತ್ರಗಳ ಎದೆಗಪ್ಪುವ
ಸಾವಿರ ಪ್ರೇಮಿಗಳು
ಅನುಕ್ಷಣವು ಪ್ರತೀಕ್ಷೆ ಮಾಡುತ್ತಾರೆ
ಹೃದಯವು ಚೀರಿದ ಆಕ್ರಂದನವ ಕೇಳುವ
ಸಹಿಸಿ ಸಾಂತ್ವನ ನೀಡುವ
ಒಬ್ಬನೇ ಒಬ್ಬ ಪ್ರೇಮಿಯ ನಾ ಹುಡುಕುತ್ತಿರುವೆ
ಪೆಸೆಯಾರದ ಮಣ್ಣಿನ ತಾಳ್ಮೆಯಲಿ
ಹೃದಯ ಮರುಹುಟ್ಟು ಪಡೆಯಲೆಂದು
ಹಾರೈಸುವುದು ಮಾತ್ರ ಕವಿಯ ಕೆಲಸ
– ಡಾ. ಸತ್ಯಮಂಗಲ ಮಹಾದೇವ, ಬೆಂಗಳೂರು