ಬಳ್ಳಾರಿ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.೧೦೦ರಷ್ಟು ಫಲಿತಾಂಶ

ಬಳ್ಳಾರಿ, ಆ.27: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ೨೦೨೨-೨೩ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಪ್ರಥಮ ಹಾಗೂ ಮೂರನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿದ್ದು, ಸ್ಥಳೀಯ ಬಳ್ಳಾರಿ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯವು ಶೇ ೧೦೦ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಅತ್ಯುತ್ತಮ ಶಿಕ್ಷಣ ಮಹಾವಿದ್ಯಾಲಯವಾಗಿದೆ.
ಕಾಲೇಜಿನ ಬಿ.ಇಡಿ ಮೂರನೇ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳಾದ ರವಿಕುಮಾರ ಟಿ ೯೧.೬%, ಮಿಲಿಟರಿ ಬೇಬಿ ಆಯಿಶ ೯೦.೦೮%, ದೇವರಾಜ ವೈ ೯೦.೩%, ತುಳಸಿ ಎ ೯೦.೧%, ಗೌತಮಿ ಕೆ ಎಚ್ ೮೯.೧%, ವಾಣಿಶ್ರೀ ೮೯.೧%, ಶ್ರಾವಣಿ ಡಿ ಎಸ್ ೮೯%, ಮರಿಸ್ವಾಮಿ ೮೮.೫%, ನೇತ್ರ ೮೮.೩%, ಸುಶೀಲ ೮೮.೩%, ವೀಣಾಕುಮಾರಿ ೮೮%, ರಾಜ ಕೆ ೮೮%, ಸುನಿಲ್ ಕುಮಾರ್ ೮೮%, ಬೆಣಕಲ್ ದುರ್ಗಮ್ಮ ೮೭.೮%, ಶರಣಮ್ಮ ೮೭.೮% ಒಟ್ಟಾರೆ ೩೬ ಪ್ರಶಿಕ್ಷಣಾರ್ಥಿಗಳು ಅತ್ಯುತ್ತಮ ಶ್ರೇಣಿ(ಡಿಸ್ಟಿಂಕ್ಸನ್), ೪೪ ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳಾದ ಕೆ ಬಿ ಸ್ಪೂರ್ಥಿ ೯೧.೧%, ಸಹನಾ ಬಿ ೯೧%, ಸಿಂಧು ೯೦% ಒಟ್ಟಾರೆ ೩೮ ಪ್ರಶಿಕ್ಷಣಾರ್ಥಿಗಳು ಅತ್ಯುತ್ತಮ ಶ್ರೇಣಿ(ಡಿಸ್ಟಿಂಕ್ಸನ್), ೬೦ ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಡಾ. ವಿ ರಾಮಾಂಜಿನೇಯ (ಅಶ್ವ ರಾಮು) ಅವರು ತಿಳಿಸಿದ್ದಾರೆ.  ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಜಗದೀಶ್ ಕುಮಾರ್, ಪ್ರಾಂಶುಪಾಲ ಡಾ.ವಿ ರಾಮಾಂಜಿನೇಯ (ಅಶ್ವ ರಾಮು) ಹಾಗೂ ಬೋಧಕರಾದ ಜಯದೇವಯ್ಯ ಎಂ ವಿ, ಆಲಂಬಾಷಾ, ನಾಗೇಶಬಾಬು, ಆರ್ ಚಂದ್ರಶೇಖರ್, ಶ್ರೀಕಾಂತ ಮುನಿ, ರೆಡ್ಡಿಹಳ್ಳಿ ಗಿರಿಜಾ, ಅಶ್ವಿನಿ, ಅನುಷಾ, ಬೋಧಕೇತರ ಸಿಬ್ಬಂದಿಗಳಾದ ನೀಲಕಂಠ, ಚಂದ್ರಶೇಖರ್ ನಾಯ್ಡು, ಸುಲೋಚನ, ಚಂದ್ರಶೇಖರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.