ಅನುದಿನ ಕವನ-೯೭೨, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ‘ಹನಿ’ಗಳು….!

ಐದು ‘ಹನಿ’ಗಳು….!

೧. ಅದಮ್ಯ ಪ್ರೀತಿ

ಪತಿ – ಪತ್ನಿ
– ಯರೀರ್ವರಲ್ಲಿ
ಇರಬೇಕು
‌‌‌‌ ಅದಮ್ಯ ಪ್ರೀತಿ ;
ಪ್ರೀತಿ ಇಲ್ಲದಿರೆ
ಬದುಕು ದಿನವೂ
ಯುದ್ಧದ ರೀತಿ.

೨.ನನ್ನ ‌ಅಹವಾಲು

ಬೇಕಿಲ್ಲ ಮಹಲು
ಸುಖ ಪಡಲು
ನಿನ್ನ ಪ್ರೀತಿಯ
ಹೊನಲು
ಸದಾ ಹೀಗೇ ಇರಲೆಂಬುದೇ
ನನ್ನ ಅಹವಾಲು.

೩.ನೀನಿರಲು

ನೀ ಬಳಿಯಿದ್ದಾಗ
ಒಂದೂ ಮಾತನಾಡದಿದ್ದರೂ
ಮನ
ಸಂತಸದ ಕಡಲು ;
ನೀ ದೂರಾದರೆ
ಸಾಕು
ಬರೀ ಆತಂಕ ದಿಗಿಲು.

೪. ಗೊತ್ತಿಲ್ಲವೆ…..

ನೀ ಕರೆದಾಗ
ಬರಲಿಲ್ಲವೆಂದು
ದೂರುವಿಯಲ್ಲಾ! ;
ನಿನ್ನ ಹೃದಯದಲ್ಲೇ
ನಾ ಅವಿತಿರುವುದು
ಗೊತ್ತಿಲ್ಲವೆ ನಲ್ಲಾ?.

೫. ನಾ…..

ನೀ ಬಳಿ ಇರದ
ಈ ಕ್ಷಣ
ನೀರಿಲ್ಲದ
‌‌‌ ಮೀನಿನಂತೆ ;
ನೀ ಬಳಿ ಬಂದ
ತಕ್ಷಣ
ಗರಿಬಿಚ್ಚಿದ
‌‌‌‌ ನವಿಲಿನಂತೆ.

-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ