ಬೆಂಗಳೂರು, ಸೆ.೨: ಕೇಂದ್ರ ಸರಕಾರದ 2023ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆ ಜಿಲ್ಲೆಯ ಸಪ್ನಾ ಶ್ರೀಶೈಲ ಅನಿಗೋಳ ಅವರನ್ನು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ(ಕವಿತಂಅ) ಸನ್ಮಾನಿಸಿ ಗೌರವಿಸಿತು.
ಅಕಾಡೆಮಿ ಆಯೋಜಿಸಿರುವ ಐದು ದಿನಗಳ ಆಡಿಯೋ ವಿಡಿಯೋ ಎಡಿಟಿಂಗ್ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಸಪ್ನಾ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿಯ ಹಿರಿಯ ವೈಜ್ಞಾನಿಕ ಅಧಿಕಾರಿಗಳಾದ ಡಾ. ಆರ್ ಆನಂದ್, ಅಂಟೋನಿ ಎಂ ಲೋಬೊ ಉಮೇಶ ಘಾಟಗೆ ವಿ.ಕೆ. ಶ್ರೀನಿವಾಸು, ಅಕಾಡೆಮಿಯ ಯೋಜನಾ ಸಂಯೋಜಕ ಎಸ್.ಎನ್.ಸಿದ್ದೇಗೌಡ, ಆಡಳಿತಾಧಿಕಾರಿ ಮಾದೇಗೌಡ ಮತ್ತಿತರರು ಉಪಸ್ಥಿತರಿದ್ದರು.
ನಾಳೆ ನವದೆಹಲಿಗೆ ಪ್ರಯಾಣ: ಸೆ. 5 ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಉತ್ತಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಭಾನುವಾರ ಸಪ್ನಾ ಅವರು ವಿಮಾನದ ಮೂಲಕ ಕುಟುಂಬದ ಸದಸ್ಯರ ಜತೆ ಪ್ರಯಾಣ ಬೆಳೆಸಲಿದ್ದಾರೆ.
ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು ಸಪ್ಮಾ ಅವರನ್ನು ಅಭಿನಂದಿಸಿ, ಪ್ರಯಾಣಕ್ಕೆ ಶುಭ ಕೋರಿದ್ದಾರೆ.
—–