ಅನುದಿನ ಕವನ-೯೭೬, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ತಾಯಿ, ತಂದೆ, ಗುರು
ಋಣಗಳು ಬದುಕಿನಲಿ
ತೀರಿಸಲಾರದ ಋಣಗಳು
ಇಬ್ಬನಿಯ ಒಡೆಯಾ.

ತಾಯಿಪ್ರೀತಿಗೆ  ಕೊಡಲೇನೂ ಇಲ್ಲ.
ಮುಗುಳುನಗುವಿಗೇ ಆಕೆ ಸಂತೃಪ್ತೆ.
ಮಕ್ಕಳು ಸುಖದಲಿರುವರೆಂಬ
ಭಾವವೇ ತಂದೆಗೆ ಪರಮಸುಖ.

ಶಿಷ್ಯರು ತನ್ನನು ಮೀರಿ ಬೆಳೆದರೆ
ಸಾಕು. ಗುರುವಿಗೆ ಅದೇ ಕಾಣಿಕೆ.
ಈ ಮೂವರ ಋಣದ ಭಾರ
ಸದಾ ಶಿರದ ಮೇಲಿರಲೆಂದು ಕೋರಿಕೆ.

– ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು