ಅನುದಿನ ಕವನ-೯೮೨, ಕವಿ: ಮಹಿಮ, ಬಳ್ಳಾರಿ

ಪ್ರಶಾಂತವಾಗಿ ಹರಿವ ನದಿಯ ಒಳಗಿನ ರಭಸದಂತೆ ನೀನು
ಮುನ್ನುಗ್ಗಿ ಮುನ್ನುಗ್ಗಿ ಓಡಿ ನನ್ನೆದೆಯಲ್ಲಿ ಅವಿತು ಗುಪ್ತಗಾಮಿನಿಯಾದೆ

ಎದೆಯೊಳಗೆ ಅವಿತು‌ ಪಿಸುದನಿಯಲ್ಲಿ ಹೆಸರಿಡಿದು ಕರೆದು
ಕೆಣಕುವೆಯಲ್ಲ

ಎದೆಯಾಳದಿಂದ ಹೊರಗೆದ್ದು ಬಾ
ಕಣ್ತುಂಬ ನೋಡಬೇಕು ನಿನ್ನ
ಬರಸೆಳೆದು ಅಪ್ಪಬೇಕು
ಮನಸಾರೆ ಮಾತನಾಡಬೇಕು

ತಗ್ಗಿಗೆ ಹರಿಯುವ ನದಿಯಲ್ಲ ನೀನು
ನಭಕ್ಕೆ ಚಿಮ್ಮುವ ಗಂಗೆ ನೀನು
ಮನದಾಳದಿಂದ ಚಿಮ್ಮಿ ಪುಟಿದು ಹೊರಗೆ ಬೇಗ ಬಂದುಬಿಡು
ಅವಿತಿದ್ದು ಸಾಕು
ನೀ ಚಿಮ್ಮುವುದ ನಾ ನೋಡಬೇಕು
ಚಿಮ್ಮುವ ಗಂಗೆಯಲ್ಲಿ ನಾ ಮೀಯಬೇಕು


-ಮಹಿಮ, ಬಳ್ಳಾರಿ