ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಣ್ಣಿನ ತಪಾಸಣೆ ಶಿಬಿರ

ಬಳ್ಳಾರಿ, ಸೆ.13:ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ  ಅಂಧತ್ವ ಮುಕ್ತ ಬಳ್ಳಾರಿ ಕಾರ್ಯಕ್ರಮದಡಿ ಬುಧವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿಯಾಯಿತು.

                                                   ವೈದ್ಯಾಧಿಕಾರಿಗಳು ಕಾಲೇಜಿನ ಎಲ್ಲಾ ಪ್ರಶಿಕ್ಷಣಾರ್ಥಿಗಳ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಯವರ ಕಣ್ಣಿನ ತಪಾಸಣೆ ನಡೆಸಿದರು.                                 ಪ್ರಾಂಶುಪಾಲ ಡಾ.ವಿ ರಾಮಾಂಜಿನೇಯ (ಡಾ.ಅಶ್ವ ರಾಮು), ಉಪ ಪ್ರಾಂಶುಪಾಲ ನಾಗೇಶಬಾಬು, ಸಹಾಯಕ ಪ್ರಾಧ್ಯಾಪಕರಾದ ಜಯದೇವಯ್ಯ ಎಂ ವಿ, ಆಲಂಬಾಷಾ, ಆರ್ ಚಂದ್ರಶೇಖರ್, ಶ್ರೀಕಾಂತ ಮುನಿ, ರೆಡ್ಡಿಹಳ್ಳಿ ಗಿರಿಜಾ, ಅಶ್ವಿನಿ, ಅನುಷಾ, ಬೋಧಕೇತರ ಸಿಬ್ಬಂದಿಗಳಾದ ಕೆ ನೀಲಕಂಠ, ಚಂದ್ರಶೇಖರ್ ನಾಯ್ಡು, ಸುಲೋಚನ, ಚಂದ್ರಶೇಖರ ಉಪಸ್ಥಿತರಿದ್ದು ಕಣ್ಣಿನ ತಪಾಸಣೆಗೆ ಒಳಗಾದರು.