ನಿಶಬ್ದ ಇರುಳಿನಾಗಸದಲ್ಲಿ ಅರಳುತ್ತಿದೆ
ಬೆಳ್ಳಿ ಬೆಳಕಿನ ಪ್ರೇಮ
ಮನದ ಸದ್ದು ಗದ್ದಲಗಳಿಗೆಲ್ಲಾ ತೆರೆ ಎಳೆದು
ಬೆಳದಿಂಗಳ ನಗೆ ಆಕಾಶ ಆವರಿಸುವಾಗ
ಈ ನೆಲದ ಮಲ್ಲಿಗೆಯ ದಳದಳದಲ್ಲೆಂಥಾ
ಸಂಭ್ರಮ!
ರಥವೇರಿ ಕೆಳಗಿಳಿದು ಈ ಹೂವ
ಜೊತೆಗೊಯ್ಯುತ್ತಿರುವನು ಭೂಮಿಸಖ
ಪಾಲ್ಗಡಲ ತುಂಬೆಲ್ಲಾ…. ಪ್ರಾಣಸುಖ….
ಕನಸುಗಳ ನಕ್ಷತ್ರವೀಗ ಜೋಕಾಲಿ ಕಟ್ಟಿ
ಜೀಕುತ್ತಿದೆ ಈ ಜೀವ ,ಆ ಜೀವದೊಳಗೇ
ಮುಚ್ಚಿದ ಕಣ್ಣರೆಪ್ಪೆಗಳಲ್ಲಿರುವುದು….
ಕವಿತೆಯ ಘಮವೇ?
ಚಂದಿರನ ಬಿಂಬವೇ ?!
-ಲಾವಣ್ಯ ಪ್ರಭಾ, ಮೈಸೂರು
—–