ಬಳ್ಳಾರಿ, ಸೆ.. ೨೩: ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್) ದ ೬೮ನೇ ಸರ್ವ ಸದಸ್ಯರ ಸಭೆ ಶನಿವಾರ ಜರುಗಿತು.
ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್) ದ ಅಧ್ಯಕ್ಷ ಜಿ. ನೀಲಕಂಠಪ್ಪ ಅವರು ಅಧ್ಯಕ್ಷತೆವಹಿಸಿದ್ದು, ವಾರ್ಷಿಕ ಮಹಾಸಭೆಯ ನೋಟೀಸಿನ ಪ್ರಕಾರ ೨೦೨೨-೨೩ ರ ಸಾಲಿನ ಆಡಳಿತ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
೨೦೨೩-೨೪ರ ಸಾಲಿನ ಮುಂಗಡ ಪತ್ರ ಮತ್ತು ೨೦೨೨-೨೩ರ ಸಾಲಿನ ಮುಂಗಡ ಪತ್ರದ ಹೆಚ್ಚುವರಿ ಖರ್ಚುಗಳಿಗೆ ಅನುಮೋದನೆ ಹಾಗೂ ೨೦೨೩-೨೪ ರ ಸಾಲಿಗಾಗಿ ಸಿದ್ದಪಡಿಸಲಾದ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಮೋದನೆ ಪಡೆಯಲಾಯಿತು.
ನಿರ್ದೇಕರಾದ ಕೆ. ವೆಂಕಟಸ್ವಾಮಿ ಅಲ್ಲೀಪುರ ಅವರು ಪ್ರಾರ್ಥಿಸಿದರು. ನಿರ್ದೇಶಕ ವೆಂಕಟೇಶ ಹೆಗಡೆ ಅವರು ಸ್ವಾಗತಿಸಿದರು. ನಿರ್ದೇಶಕಿ ಶ್ರೀಮತಿ ಪಲ್ಲೇದ ಮೈತ್ರಿ ಅವರು ಜನತಾ ಬಜಾರ ಪ್ರಾರಂಭದ ಕುರಿತು ಮಾತನಾಡಿದರು. ಜನತಾ ಬಜಾರ್ ನ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಶಾಕಿರಾ ಬಾನು ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.