ಅನುದಿನ ಕವನ ಕಾಲಂಗೆ ಸಾವಿರ ದಿನದ ಸಂಭ್ರಮ! ಈ ಹಿನ್ನಲೆಯಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಪ್ರೀತಿಯ ಶುಭಾಶಯಗಳು.
ಕರ್ನಾಟಕ ಕಹಳೆಯ ಇಂಪು ಇಡೀ ರಾಜ್ಯಾದ್ಯಂತ ಪಸರಿಸುತ್ತಿದೆ. ವ್ಯಕ್ತಿ ಪರಿಚಯ, ಲೇಖನ, ವಿವಿಧ ಕಾರ್ಯಕ್ರಮಗಳ ಪ್ರಸಾರ ಮತ್ತು ರಾಜ್ಯದ ಹಲವಾರು ಜಿಲ್ಲೆಗಳ ಕವಿಮಿತ್ರರು ಹಾಗೂ ಹೊಸ ಪ್ರತಿಭೆಗಳು ತಮ್ಮ ಕವನಗಳನ್ನು ರಚಿಸುವ ಮೂಲಕ ಹೊಸ ಛಾಪು ಮೂಡಿಸಿದ್ದಾರೆ.
ಕರ್ನಾಟಕ ಕಹಳೆಯ ಸಂಪಾದಕ ಸಿ.ಮಂಜುನಾಥ್ ಅವರು ಕ್ರಿಯಾಶೀಲರು. ಸದಾ ಹೊಸತನದ ಕಾರ್ಯಗಳಿಂದ ಗಮನಸೆಳೆದವರು. ನಮ್ಮ ಫ್ಯಾಮಿಲಿಗೆ ಸುಮಾರು ವರ್ಷಗಳಿಂದ ಆತ್ಮೀಯರು. ಅವರ ಪ್ರತೀ ಸಾಧನೆಗೆ ಸದಾ ಬೆಂಬಲವಿತ್ತಿದ್ದೇವೆ. ಈಗ “ಆನ್ ಲೈನ್ ಪತ್ರಿಕೆ”ಯ ಅನುದಿನ ಕವನ ಕಾಲಂನಲ್ಲಿ ನಿರಂತರ ಸಾವಿರ ಕವನಗಳನ್ನು ಪ್ರಕಟಿಸಿ ದಾಖಲೆ ಬರೆದಿದ್ದಾರೆ. ಮಂಜುನಾಥ್ ಅವರ ಹಲವು ಸಾಧನೆಗಳಲ್ಲಿ ಇದು ಕೂಡ ಒಂದು ಮೈಲುಗಲ್ಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ನಾಟಕ ಕಹಳೆಯಲ್ಲಿ ನನ್ನ ಹಲವು ಕವನ, ಚಿತ್ರ ಕವನ, ಚುಟುಕು, ಲೇಖನ, ಹಾಸ್ಯ ಲೇಖನ ಇತ್ಯಾದಿ ಪ್ರಕಟಿಸುವುದರ ಮೂಲಕ ನಮ್ಮ ಬರವಣಿಗೆಗೆ ಬೆಂಬಲ ನೀಡುತ್ತಿದ್ದಾರೆ. ನನ್ನ 60 ರಿಂದ 70 ಕವನಗಳು ಕರ್ನಾಟಕ ಕಹಳೆಯಲ್ಲಿ ಬೆಳಕು ಕಂಡಿವೆ.
ಅನುದಿನದ ಕವನದ 500ರ ಸಂಭ್ರಮದಲ್ಲಿ ನನ್ನ ಕವನ ಪ್ರಕಟಗೊಂಡಿದೆ. ಇದೀಗ 1000ದ ಸಂಭ್ರಮದಲ್ಲೂ ನನ್ನ ಕವನ ಪ್ರಕಟವಾಗುತ್ತಿರುವುದು ಹೆಮ್ಮೆ ಮತ್ತು ಸಂತಸದ ಸಂಗತಿ. ಈ ಕವಿತೆ ರಾಗ ಸಂಯೋಜನೆಗೊಂಡಿದ್ದು ಕಹಳೆಯ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಣ್ಯರು, ಪ್ರೇಕ್ಷಕರ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ. ಕಹಳೆಯ ಅನುದಿನ ಕವನ ಕಾಲಂ ಎರಡು, ಮೂರು, ನಾಲ್ಕು, ಐದು ಸಾವಿರ ಸಂಭ್ರಮ ಆಚರಿಸಲಿ ಎಂದು ಹಾರೈಸುವೆನು.
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
🍀👇🌺🍀💐👇
ಸಾವಿರದ ಸಾಧನೆ
ಸಾವಿರ ಸಂಖ್ಯೆಯ ತಲುಪಿತು
“ಕರ್ನಾಟಕ ಕಹಳೆ ” ಯ ಅನುದಿನ ಕವನ
ಈ ದಿನ ಸಂಭ್ರಮಿಸುವ
ಘಳಿಗೆ ಬಂದಿತು, ಶುಭ ವೇಳೆ
ಕಹಳೆ ಮೊಳಗುವ ಸದ್ದಿನ ಪರಿ
ಎಣಿಕೆಗೆ ನಿಲುಕೀತೆ !?
ಸಾಗರದ ಉದ್ದ ಅಗಲ
ಅಳತೆ ಮಾಡಲಾದೀತೆ ?||
ಕಹಳೆ ಮೊಳಗುತೈತೆ ನಿತ್ಯ ಮೊಳಗುತೈತೆ
ನಿಲ್ಲದೇ ನಿರಂತರ
ಹೊಸ ಖುಷಿಯೊಂದು ಹರುಷದಿ ಇಂದು
ತಲುಪಿದೆ ಮನೆಯಾ, ಮನಸಲಿ ಬಂದು
ಆನಂದದಿ ಆ ದಿನದಿ
ಬಳ್ಳಾರಿಯಲಿ ಅಂದು
ಈ ದಿನ ಘಳಿಗೆಗೆ
ಶುಭವಾ ತಂದ ಹೂ ನಗೆ ||
ಅನುದಿನ ಕವನ, ಚಿತ್ರದ ಕವನ
ನಿತ್ಯವೂ ನಿಲ್ಲದು, ಎಂದು ಅಂಕಣ ನಿಲ್ಲದು
ಹಿರಿಯರೆ ಇರಲಿ, ಕಿರಿಯರೆ ಇರಲಿ
ಪ್ರೀತಿಯ ತೋರಿಹರು
ಇಂದು ಸಾವಿರ ತಲುಪಿಹುದು
ಕಹಳೆಯಾ ಸ್ವರವೂ
ಹರಡಿದಾ ಹರವೂ ||
ಸಾಮಾಜಿಕ, ಸಾಹಿತ್ಯ ಕಾರ್ಯದಿ
ತೊಡಗುವ ಶ್ರಮಿಕ
ಹಗಲು – ಇರುಳು ಶ್ರಮಿಸುವ ದ್ಯೋತಕ
ಮಾತೃ ಹೃದಯಿ ಮಾತುಗಾರ
ಆಡಂಬರವಿಲ್ಲದ ಸಾಹುಕಾರ
“ಅಪ್ಪ” ಪ್ರಶಸ್ತಿ ಪ್ರತಿ ವರ್ಷ
ಕೊಡುವ ಪ್ರೀತಿ ಅಪಾರ
ಅಪರಂಪಾರ ||
ಗುಣದಲ್ಲಿ, ದಾನದಲ್ಲಿ, ಸೇವೆಯಲ್ಲಿ
ಅಪ್ಪನದೇ ಅಚ್ಚು
ಬಹು ಅಚ್ಚು – ಮೆಚ್ಚು
ಆಂತರ್ಯದ ಭಾವನೆ ಅರ್ಥೈಸಿ
ಅಕ್ಷಿಯೊಳಗಣ ಮುಚ್ಚಿ
ಕಾಯುವ ಮೀನಾಕ್ಷಿ ;
ಇವರ ಹೊಂದಾಣಿಕೆಯೇ ಸಾಕ್ಷಿ ||
ಹೀಗೆಯೇ ಸಾಗಲಿ
ದಂಪತಿಗಳ ಸಂಸಾರಿಕದ, ಸಾಮಾಜಿಕದ
ಪ್ರೀತಿ ಪಯಣದ ಚಿತ್ರಣ
ನಿರಂತರ ಸಾಗುತಿರಲಿ
ಕರ್ನಾಟಕ ಕಹಳೆಯ ಪಯಣ
ಅನುದಿನ ||
-ಶೋಭಾ ಮಲ್ಕಿ ಒಡೆಯರ್, ಹಿರಿಯ ಕವಿಯಿತ್ರಿ,
ಹೂವಿನ ಹಡಗಲಿ
——