ಧಾರವಾಡ, ಸೆ.27: ಗರಗ ಖಾದಿ ಗ್ರಾಮದ್ಯೋಗ ಸಂಘಕ್ಕೆ ಈ ಬಾರಿಯ ಗಾಂಧಿ ಪುರಸ್ಕಾರ ಲಭಿಸಿದೆ.
ಮಹಿಳೆಯರೇ ನಡೆಸುತ್ತಿರುವ ಹಾಗೂ ಇಡೀ ಭಾರತದಲ್ಲಿ ರಾಷ್ಟ್ರ ಧ್ವಜವನ್ನು ಅತ್ಯುತ್ತಮ ಗುಣಮಟ್ಟದ ಖಾದಿಯಲ್ಲಿ ನಿಖರವಾಗಿ ತಯಾರಿಸುತ್ತಿರುವ ಗರಗ ಗ್ರಾಮದ ಈ ಸಂಘವನ್ನು ಕರ್ನಾಟಕ ವಾರ್ತಾ ಇಲಾಖೆಯು ಈ ಬಾರಿ ಗಾಂಧಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ರೇಷ್ಠ ಪರಿಗಣನೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಜಗದೀಶ ಕೊಪ್ಪ ಅವರು ಬಣ್ಣಿಸಿದ್ದಾರೆ.
ಧಾರವಾಡದಿಂದ ಆರು ಕಿಲೋಮೀಟರ್ ದೂರವಿರುವ ಈ ಗ್ರಾಮದಲ್ಲಿ ಗಾಂಧಿಯವರ ಖಾದಿ ಗ್ರಾಮೋದ್ಯೋಗ ಚಟುವಟಿಕೆಯನ್ನು ಜೀವಂತವಾಗಿಟ್ಟಿರುವ ಇಲ್ಲಿನ ಕೇಂದ್ರ ಸಹೋದರಿಯರ ಬದ್ಧತೆಗೆ ಸಿಕ್ಕ ಗೌರವ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.