ಶಿಕ್ಷಕರ ದಿನಾಚರಣೆ: ಆದರ್ಶ ನಿವೃತ್ತ ಶಿಕ್ಷಕಿ ಸುಜಾತ ಅವರಿಗೆ ಗೌರವ ಸನ್ಮಾನ

ಬಳ್ಳಾರಿ, ಅ.2: ಶಿಕ್ಷಣ ಇಲಾಖೆಯಿಂದ ವಯೋನಿವೃತ್ತಿಯಾದರೂ ಕಳೆದ 8 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಉಚಿತ ಸೇವೆ ಮೂಲಕ ಸಂತೃಪ್ತಿ ಕಾಣುತ್ತಿರುವ ಹಿರಿಯ ನಿವೃತ್ತ ಶಿಕ್ಷಕಿ ಸುಜಾತ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಜರುಗಿದ ಬಳ್ಳಾರಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಅಭಿನಂಧನಾ ಸಮಾರಂಭದಲ್ಲಿ ಅವರ ಮಾದರಿ ಮತ್ತು ಆದರ್ಶ ಸೇವೆಯನ್ನು ಪ್ರಶಂಸಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೂರ್ವ ವಲಯದ ಬಿಇಒ ನಯೀಮುರ್ ರಹಮಾನ್ ಮಾತನಾಡಿ, ಶಿಕ್ಷಕರು ರಾಷ್ಟ್ರದ ನಿರ್ಮಾತೃಗಳು ಎಂದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು ಉತ್ತಮವಾಗಿ ಕೆಲಸ ಮಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಸ್.ಎಸ್.ಎಲ್.ಸಿ.ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಈಗಿಂದಲೇ ಶ್ರಮಿಸಲು ತಿಳಿಸಿದರು, ಶಿಕ್ಷಕರ ಯಾವುದೇ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ಕೊಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ‌ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿ ಶೀಘ್ರದಲ್ಲೇ ಮುಖ್ಯ ಶಿಕ್ಷಕರಿಗೆ ಬಡ್ತಿಯನ್ನು ಕೊಡಿಸಲು ಮನವಿ ಮಾಡುವುದಾಗಿ ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ರಮೇಶ್, ಮೃತ್ಯುಂಜಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗೆ ಭಾಜನರಾದ ಸಿಂಧಿಗೇರಿ ಶಾಲೆಯ ಶಿಕ್ಷಕ ಎಜಾಜ್ ಅಹಮದ್, ಕೆ.ಪಿ.ಎಸ್.ಮೋಕಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಲ್.ಎಂ.ಮಂಗಳ, ಹಗರಿ ಫಾರಂ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರಾದ ಹೆಚ್.ಈಶ್ವರಪ್ಪ ಅವರನ್ನು ಅಭಿನಂಧಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಆರ್.ಸಿ.ಮಲ್ಲಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರೇವಣ್ಣ , ಶಿಕ್ಷಕರ ಸಂಘದ ಮುಖಂಡರಾದ ,ಗಿರಿಮಲ್ಲ,ಶಿವನನಾಯ್ಕ್, ವೀರೇಶ್ ದಮ್ಮೂರು, ಪದಾಧಿಕಾರಿಗಳಾದ ಗಿರೀಶ್,ಎ.ಕೆ.ಮಲ್ಲಿ, ಪಂಪಾಪತಿಗೌಡ, ಓಂಕಾರ ರೆಡ್ಡಿ, ರಿಜ್ವಾನ್,ಹರಿ ಪ್ರಸಾದ್, ರಾಘವೇಂದ್ರ,ರಿಜ್ವಾನ್, ಪಂಪನಗೌಡ, ರಾಜಾಪುರ ವೀರೇಶ್, ಚನ್ನಬಸಪ್ಪ, ಹನುಮಂತಪ್ಪ, ಎರಿಸ್ವಾಮಿ, ಓಂಕಾರರೆಡ್ಡಿ, ಗಿರೀಶ, ಮುಜೀಬ್, ಸಲೀಂ, ಕೆ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಕ್ಲೇನ್ ಪ್ರಾರ್ಥಿಸಿದರು. ನೋಡಲ್ ಅಧಿಕಾರಿ, ಶಿಕ್ಷಣ ಸಂಯೋಜಕ ಗೂಳೆಪ್ಪ ಬೆಳ್ಳೇಕಟ್ಟೆ ಅವರು ಸ್ವಾಗತಿಸಿದರು. ಶಿಕ್ಷಕಿ ಅಂಬಿಕಾ ನಿರೂಪಿಸಿದರು. ಬಿ.ಆರ್.ಪಿ. ವಸಂತ, ಇಸಿಒ ಹಿರೇಮಠ್ ನಿರ್ವಹಿಸಿದರು.
—–