ಹಾವಿನ ನುಣುಪು,
ಗುಬ್ಬಿಯ ಪುಳಕ,
ಮೀನಿನ ನೋವು,
ಹೂಗಳ ಹಾಡನ್ನು
ಮಾತಾಡಿಸುವ ಅವನು
ಅಲ್ಲೇ ಕಳೆದು ಹೋಗಿರುತ್ತಾನೆ
ಅವನನು ಹುಡುಕುವ ಹುಕಿಗೆ ಬಿದ್ದವರು
ಬರಿಗೈಯಲ್ಲಿ ಮರಳುತ್ತಾರೆ
ಪೊರೆ ಕಳಚಿ
ಹೊಸತಾಗುವ ಅವನಿಗೆ
ಯಾರನೂ ನಿರಾಸೆಗೆ ದೂಡುವ
ಮನಸಿರುವುದಿಲ್ಲ
ಆದರೂ,
ತೀರದ ಆಸೆಯನು ಹೊತ್ತೊಯ್ಯುವ
ನಾವು ಭಾರಗೊಳ್ಳುತ್ತೇವೆ…
ಅವ ಹಕ್ಕಿ ಹಗುರ…
ನಾನೂ…,
ಅವನನ್ನೇ ಆರಿಸಿಕೊಳ್ಳುತ್ತೇನೆ ಪ್ರೇಮಿಸಲು…
-ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ
—–