ಅನುದಿನ ಕವನ-೧೦೧೧, ಕವಿ: ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ: ಹಕ್ಕಿ ಹಾಡು ಮತ್ತು ನಾನು

ಹಕ್ಕಿ ಹಾಡು‌  ಮತ್ತು‌ ನಾನು

ಒಂದು ಗಿಡದ ಒಂಟಿ
ಟೊಂಗೆಯಲಿ ಹಕ್ಕಿ
ಹಾಡೊಂದು ಕೇಳಿಸಿತು

ಹತ್ತಿರ ಹೋಗಿ ಲಕ್ಷ್ಯ
ಕೊಟ್ಟು ಹಾಡು ಕೇಳಿದೆ
ಅದೇಕೋ ಆ ದನಿಯಲ್ಲಿ
ನೀರಸವಾದ ಬೇಸರ
ಭಾವ ಮುತ್ತಿಕ್ಕುತಿತ್ತು

ಅರೇ ತುಂಟ ಹಕ್ಕಿ
ಅವಳಿರದ ನನ್ನ
ಒಂಟಿ ಮನಸಿನ
ತುಡಿತ ಕೇಳಿದೆಯಾ
ನಾನರಿಯದಂತೆಯೆ
ಮನದೊಳಗೆ
ಹಕ್ಕಿ ಹೊಕ್ಕು
ನೋವು ಅಲಿಸಿತಾ

ನಾನರಿಯದ ನೂರೆಂಟು
ಪ್ರಶ್ನೆಗಳು ಮೂಡಿ
ಹಕ್ಕಿಯನು ಮಾತಾಡಿಸ
ಹೋದೆ
ಟೊಂಗೆಯಿಂದ ಪುರ್ರನೇ
ಹಾರಿದ ಹಕ್ಕಿ
ಮತ್ತೆ ನನ್ನ ಒಂಟಿ
ಮಾಡಿ ಹಾರಿ ಹೋಯಿತು

ಅಲ್ಕಿ ಉಳಿದದ್ದು
ನಾನು ಮತ್ತು ಒಂಟಿತನ
ಮಾತ್ರ!

-ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ
—–