೧
ಸುತ್ತ ಬೆಳಕು
ನೀಡಿ; ಸಂತನ ಮೌನ
ಹಣತೆ ಗುಣ
೨
ಎಂಥ ಮೇಕಪ್ಪು
ಅವಳದು; ನಾಚಿತ್ತು
ಮುಖದ ಕಪ್ಪು!
೩
ಬೀಜ ಮೊಳೆತು
ವಿಶಾಲ ವೃಕ್ಷ; ನಿತ್ಯ
ಹಸಿರು ಹಬ್ಬ
೪
ಜಗದಲಾರೂ
ಕಾಣರು; ಏರಿದಾಗ
ಪ್ರೀತಿಯಮಲು
೫
ಕೊಚ್ಚೆ ನೀರನು
ಕುಡಿದ ತೆಂಗು; ನಿತ್ಯ
ಅಮೃತ ಧಾರೆ
– ಸಿದ್ದಲಿಂಗಪ್ಪ ಬೀಳಗಿ, ಹುನಗುಂದ
—–